ಪಡಿತರದಾರರ ದಿಕ್ಕು ತಪ್ಪಿಸುತ್ತಿರುವ ಅನಾಮಧೇಯ ಕರಪತ್ರ : ನ್ಯಾಯಬೆಲೆ ಅಂಗಡಿ ಮಾಲೀಕನ ಆಕ್ರೋಶ
ರಿಪ್ಪನ್‌ಪೇಟೆ; ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಕಳೆದ 34 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈ ನ್ಯಾಯಬೆಲೆ ಅಂಗಡಿಯ ಕಾರ್ಡ್‌ದಾರರನ್ನು ಪಕ್ಕದ ನ್ಯಾಯಬೆಲೆ ಅಂಗಡಿಯವರು ತಮ್ಮ ಕಡೆ ಸೆಳೆಯುವ ಉದ್ದೇಶದಲ್ಲಿ ಅನಾಮಿಕವಾದ ಕರಪತ್ರವನ್ನು ಹಂಚಿ ಪಡಿತರ ಫಲಾನುಭವಿಗಳ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೆದ್ದಾರಿಪುರ ನ್ಯಾಯಬೆಲೆ ಅಂಗಡಿ ಮಾಲೀಕ ಹೆಜ್ ಕೆ ನಾಗರಾಜ್ ಆರೋಪಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಇತ್ತೇಚೆಗೆ ವಡ ಹೊಸಳ್ಳಿ ಗ್ರಾಮದಲ್ಲಿ ಹೊಸದಾಗಿ ತರೆಯಲಾಗಿರುವ ನ್ಯಾಯಬೆಲೆ ಅಂಗಡಿಗೆ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಯಿಂದ ವರ್ಗಾವಣೆ ಮಾಡಿದ…