ಪವರ್ ಹೌಸ್ ನಲ್ಲಿ ದಿಡೀರ್ ಪ್ರತ್ಯಕ್ಷವಾದ ಚಿರತೆ : ಕೋಲಿನಿಂದ ಬೆದರಿಸಿ ಚಿರತೆ ಬಾಯಿಯಿಂದ ನಾಯಿಯನ್ನು ರಕ್ಷಿಸಿದ ಸೆಕ್ಯುರಿಟಿ ಗಾರ್ಡ್ : ವೀಡಿಯೋ ವೈರಲ್
ಮಾಸ್ತಿಕಟ್ಟೆ : ಮಲೆನಾಡಿನಾದ್ಯಂತ ಸೆಕ್ಯುರಿಟಿ ಗಾರ್ಡ್ ಒಬ್ಬರು ಚಿರತೆಯನ್ನು ಹೆದರಿಸಿ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್ ಆಗುತ್ತಿದೆ. ಆ ರಾತ್ರಿ ಪವರ್ ಹೌಸ್ ನಲ್ಲಿ ನಡೆದಿದ್ದೇನು??? ಅವತ್ತು ರಾತ್ರಿ ಹೊಸಂಗಡಿ ಪವರ್ ಹೌಸ್ ಭದ್ರತಾ ಕೊಠಡಿಯಲ್ಲಿ ಸೆಕ್ಯುರಿಟಿ ಈರಪ್ಪ ಗೌಡ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಅಲ್ಲಿದ್ದ ಒಂದು ನಾಯಿಯನ್ನು ಎಲ್ಲಿಂದಲೋ ಬಂದ ಚಿರತೆಯೊಂದು ಹಿಡಿದು ಓಡಲು ಆರಂಭಿಸಿತು. ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶ್ವಾನ ಜೋರಾಗಿ ಬೊಗಳಿದೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಈರಪ್ಪ…