ತುಮಕೂರು ಮೂಲದ ಯುವಕ ಶಿವಮೊಗ್ಗ ನಗರದ ಲಾಡ್ಜ್ ನಲ್ಲಿ ಆತ್ಮಹತ್ಯೆ :
ಶಿವಮೊಗ್ಗ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರಲ್ಲಿ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮ ಹತ್ಯೆ ಮಾಡಿಕೊಂಡ ಯುವಕ ತುಮಕೂರು ಜಿಲ್ಲೆ ಕೆರೆಸೂರಗೊಂಡನ ಹಳ್ಳಿಯ ಮಂಜು ನಾಥ್ (26) ಎಂದು ತಿಳಿದು ಬಂದಿದೆ. ಡೆತ್‌ನೋಟ್ ಪತ್ತೆ: ಈತ ಅಕ್ಕ ಸುಧಾಳನ್ನು ಕೊಲೆಗೈದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಸುಧಾ ತನ್ನ ಗಂಡನನ್ನು ಅವಳ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ಕೋಪದಲ್ಲಿ ಸುಧಾಳನ್ನು ಕೊಲೆ…