Headlines

ಕಾಂಗ್ರೆಸ್ ಪಕ್ಷಕ್ಕೆ ರಾಜು ತಲ್ಲೂರು ರಾಜೀನಾಮೆ : ಮುಂದಿನ ನಡೆ ಬಗ್ಗೆ ಗೌಪ್ಯತೆ…!!!!!

ಶಿವಮೊಗ್ಗ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ಇವತ್ತು ರಾಜಿನಾಮೆ ನೀಡುತ್ತಿರುವುದಾಗಿ ಸೊರಬ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ರಾಜು ತಲ್ಲೂರು ಘೋಷಿಸಿದ್ದಾರೆ. ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸಂಪೂರ್ಣ ನಿಷ್ಕ್ರಿಯ ರಾಗಿದ್ದಾರೆ. ಜಿಲ್ಲೆಯಲ್ಲಿ ಅವರಿಂದ ಪಕ್ಷ ಚೇತರಿಕೆ ಕಾಣದು. ವ್ಯಕ್ತಿಪೂಜೆಯಲ್ಲಿ ಅವರು‌ ನಿರತರಾಗಿದ್ದಾರೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸಿನಲ್ಲಿ ಒಗ್ಗಟ್ಟಿಲ್ಲ. ಈ ಬಗ್ಗೆ ರಾಜ್ಯದ ಮುಖಂಡರಿಗೆ ಮಾಹಿತಿ ನೀಡಿದ್ದೆ. ಕೆಲಸ ಮಾಡಲು‌ ಮನಸ್ಸಿಲ್ಲದವರು ಪಕ್ಷದಲ್ಲಿದ್ದಾರೆ.  ಇದರಿಂದ…

Read More

ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

 ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ‌ ನಡೆದಿದೆ. ಬೀರನಕೆರೆ ಗ್ರಾಮದ ರವಿ ನಾಯ್ಕ(18) ಮೃತ ಯುವಕ. ರವಿನಾಯ್ಕ ಭಾನುವಾರ ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ಗ್ರಾಮದ ಎಂಪಿಎಂ ಕಟ್ಟೆಯ ಬಳಿ‌ ಹೋದಾಗ, ಹಸು ನೀರಿಗೆ ಇಳಿದಿದೆ. ಈ ವೇಳೆ ಹಸು‌ ನೀರಿನ ಆಳಕ್ಕೆ ಹೋದಾಗ ಹಸುವನ್ನು ಕರೆದುಕೊಂಡು ಬರಲು ಹೋಗಿ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹಸು ಮನೆಗೆ ಬಂದಿದೆ. ಆದರೆ ರವಿ ಮನೆಗೆ ಬಾರದೆ…

Read More

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು : ಅಭಿಷೇಕ್ ಹುಂಚ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು. ಅವರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ಯುವ ಮುಖಂಡ ಅಭಿಷೇಕ್ ಹುಂಚ ಹೇಳಿದರು. ಹುಂಚದಲ್ಲಿ(HUMCHA) ಇಂದು ಪಂಡಿತ್ ದೀನ್ ದಯಾಳ್ ಜೀ ಅವರ ಜನ್ಮದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ದೀನ್ ದಯಾಳ್ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಳಕಳಿ ಹೊಂದಿದ್ದರು. ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದ್ದರು. ಸರಕಾರಿ ಯೋಜನೆಗಳು…

Read More

ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವು : ಜಮೀನು ಮಾಲೀಕ ವಶಕ್ಕೆ….

  ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಕಾಡಿನ ಆನೆ ವನ್ಯಜೀವಿ ವಲಯದಲ್ಲಿ ನಡೆದಿದೆ. ರವಿವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ.ಅಲ್ಲಿ ವನ್ಯಜೀವಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕಟ್ಟಿದ್ದಾರೆನ್ನಲಾದ ಐಬಿಕ್ಸ್ ವಿದ್ಯುತ್ ತಂತಿಯನ್ನು ಆನೆಗಳು ತುಳಿದು ವಿದ್ಯುತ್ ಪ್ರವಹಿಸಿದೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಜಮೀನು ಮಾಲಕ ಚಂದ್ರನಾಯ್ಕ್…

Read More

ಹುಂಚಾ ಕೃಷಿ ಪತ್ತಿನ ಸಹಕಾರ ಸಂಘ 7 ಲಕ್ಷ ರೂ ನಿವ್ವಳ ಲಾಭ | ಗೊಂದಲಗಳ ನಡುವೆ ಸುಖಾಂತ್ಯಗೊಂಡ ವಾರ್ಷಿಕ ಸರ್ವ ಸದಸ್ಯರ ಸಭೆ

ರಿಪ್ಪನ್‌ಪೇಟೆ;- ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 4.22 ಕೋಟಿ ರೂ ವ್ಯವಹಾರ ನಡೆಸುವುದರೊಂದಿಗೆ 7.72.109 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್.ಯದುಕುಮಾರ್ ಹೊಂಡಲಗದ್ದೆ  ತಿಳಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತುಂಗಕ್ಕೆ ತರುವ ಬಗ್ಗೆ ಹಲವು ಅಶೋತ್ತರಗಳನ್ನು ಇಟ್ಟುಕೊಂಡಿದ್ದು ಸಂಘದ ಸದಸ್ಯರು ಪ್ರೋತ್ಸಾಹಿಸಿದಲ್ಲಿ ಸಂಘವನ್ನು ಲಾಭದತ್ತ ತರುವ ಗುರಿ ನಮ್ಮದಾಗಿದೆ ಎಂದರು. ರಿಪ್ಪನ್‌ಪೇಟೆ  ಸಮೀಪದ ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…

Read More

ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು : ಹೃದಯ ಹಿಂಡುತ್ತಿರುವ ಕುಟುಂಬಸ್ಥರ ಆಕ್ರಂದನ

ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ೧೧ ತಿಂಗಳ ಮಗು ಅಕ್ಷಯ್ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮಹಾಲಯ ಅಮವಾಸ್ಯೆ ದಿನವಾದ ಭಾನುವಾರ ಮನೆಯವರು ವಾಹನ ತೊಳೆಯುವುದು, ಪೂಜೆ ಪುನಸ್ಕಾರದ ಕಡೆ ಗಮನ…

Read More

ವಿಶೇಷ ಪ್ರಕಟಣೆ : 108 ಆಂಬ್ಯುಲೆನ್ಸ್ ಸಂಪರ್ಕಕ್ಕೆ ಪರ್ಯಾಯ ದೂರವಾಣಿ ಸಂಖ್ಯೆ ಕಲ್ಪಿಸಿದ ಆರೋಗ್ಯ ಇಲಾಖೆ

ತಾಂತ್ರಿಕ ದೋಷದಿಂದಾಗಿ ರಾಜ್ಯಾದ್ಯಂತ ಸೆಪ್ಟೆಂಬರ್​ 24ರ ರಾತ್ರಿಯಿಂದ 108 ಆಯಂಬುಲೆನ್ಸ್​ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ.ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಸಿಗದೆ ಕಷ್ಟಪಡುವಂತಾಗಿದೆ. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ಆರೋಗ್ಯ ಇಲಾಖೆ ಆಯಾ ಆಯಾ ತಾಲೂಕುಗಳಿಗೆ ಪರ್ಯಾಯ ದೂರವಾಣಿ ಸಂಖ್ಯೆಯನ್ನು ಕಲ್ಪಿಸಿದೆ. Due to non functional of 108 call centre,District has made an alternative arrangements for…

Read More

ರಾಜ್ಯಾದ್ಯಂತ ಸೆ.24 ರ ರಾತ್ರಿಯಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ : 108 ನಂಬರ್ ಗೆ ಕರೆ ಮಾಡಿದರೆ ಇಲ್ಲಾ ರೆಸ್ಪಾನ್ಸ್

ರಾಜ್ಯಾದ್ಯಂತ ಸೆಪ್ಟೆಂಬರ್​ 24ರ ರಾತ್ರಿಯಿಂದ 108 ಆಂಬುಲೆನ್ಸ್​ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಸಿಗದೆ ಕಷ್ಟಪಡುವಂತಾಗಿದೆ. ಹೀಗೆ ಆಂಬುಲೆನ್ಸ್​ ಸೇವೆ ಸ್ಥಗಿತಗೊಳ್ಳಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. 108 ತುರ್ತು ಸೇವೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ರಾಜ್ಯದೆಲ್ಲೆಡೆಯಿಂದ 20 ಸಾವಿರ ಕರೆಗಳು ಬರುತ್ತದೆ. ಆದರೆ ನಿನ್ನೆ ರಾತ್ರಿಯಿಂದ 108ಕ್ಕೆ ಕರೆ ಮಾಡಿದರೆ ಫೋನ್​ ಸಂಪರ್ಕ ಸಿಗುತ್ತಿಲ್ಲ. …

Read More

ಸಚಿವ ಅಶ್ವಥ್ ನಾರಾಯಣ್ ಕೂಡಲೇ ರಾಜೀನಾಮೆ ನೀಡಿ ಕುಮಾರಸ್ವಾಮಿ ಕ್ಷಮೆ ಯಾಚಿಸುವಂತೆ ಜೆಡಿಎಸ್ ಮುಖಂಡ ಯಡೂರು ರಾಜಾರಾಮ್ ಆಗ್ರಹ

ರಿಪ್ಪನ್‌ಪೇಟೆ : ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ನಲ್ಲಿ ನಡೆದ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿರುವ ಕಾರಣ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ರಾಜೀನಾಮೆ ಜತೆಗೆ ಈ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಅದರ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತೀರ್ಥಹಳ್ಳಿ ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಪತ್ರೀಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ನಾಯಕರಾದ ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ಅಶ್ವಥ್ ನಾರಾಯಣ ಅವರು ಎಚ್ಚರಿಯಿಂದಿರಬೇಕು.ಇಲ್ಲದಿದ್ದಲ್ಲಿ ಮುಂದಿನ…

Read More

ನವೆಂಬರ್ ಅಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.ಈ ಎಲ್ಲಾ ಕಾಮಗಾರಿಗಳು ನವೆಂಬರ್ ಮಾಸಾಂತ್ಯಕ್ಕೆ ಪೂರ್ಣಗೊಂಡು ವಿಮಾನ ನಿಲ್ಧಾಣ ಲೋಕಾರ್ಪಣೆಗೆ ಸರ್ವಸನ್ನದ್ಧಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.  ಅವರು ಇಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಶ್ರೀಮತಿ ಉಷಾಪಾಧಿ, ಗೌರವಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್…

Read More