ಖಾಸಗಿ ಈಜುಕೊಳದಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು :
ಖಾಸಗಿ ಈಜುಕೊಳದಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ತನ್ನ ಸ್ನೇಹಿತರೊಂದಿಗೆ ಶಿವಮೊಗ್ಗದ ಶಕ್ತಿಧಾಮದ ಖಾಸಗಿ ಈಜುಕೊಳಕ್ಕೆ ತೆರಳಿದ್ದ ಜೋಸೆಫ್ ನಗರದ ಯುವಕ ರಾಕೇಶ್ ಎಂಬ 18 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಡಿವಿಎಸ್ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರಾಕೇಶ್ ಎರಡು ಮೂರು ದಿನಗಳಿಂದ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ತೆರಳಿ ಈಜು ಹೊಡೆಯಲು ಯೋಜನೆ ಹಾಕಿಕೊಂಡಿದ್ದ. ಇಂದು ಮಧ್ಯಾಹ್ನ ಈಜುಕೊಳಕ್ಕೆ ತೆರಳಿದ್ದ ಯುವಕ ಮನೆಗೆ ಹೊರಡುವ ವೇಳೆ ನೀರಿನಿಂದ…