ರಿಪ್ಪನ್‌ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ಶಾಂತಿ ಸಭೆ : ಡ್ರೋಣ್ ಕ್ಯಾಮೆರಾ ಅಳವಡಿಕೆಗೆ ಸೂಚನೆ

ರಿಪ್ಪನ್‌ಪೇಟೆ : ಗಣೇಶೋತ್ಸವ ಅಂಗವಾಗಿ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಪೊಲೀಸ್ ಶಾಂತಿ ಸಮಿತಿ ಸಭೆಯು ಹೊಸನಗರ ವೃತ್ತ ನಿರೀಕ್ಷಕ ಗಿರೀಶ್ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಮೊಗ್ಗ ಜಿಲ್ಲೆಯಲ್ಲಿಯೇ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣಪತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಗುತ್ತದೆ.ಮತ್ತು ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೧೦೪ ಕಡೆಯಲ್ಲಿ ಗಣಪತಿಗಳನ್ನು ಪ್ರತಿಷ್ಟಾಪಿಸಲಾಗುತ್ತಿದ್ದು ಪ್ರತಿಷ್ಟಾಪನೆಗೆ ಇಲಾಖೆ ಅನುಮತಿಗಾಗಿ ಹೊಸನಗರಕ್ಕೆ ಹೋಗಿ ಬರಬೇಕಾಗುತ್ತದೆ ಇದರಿಂದ ಅಯೋಜಕರಿಗೆ ತುಂಬ ಕಷ್ಟವಾಗುತ್ತದೆ ಆ ಕಾರಣ ರಿಪ್ಪನ್‌ಪೇಟೆಯಲ್ಲಿಯೇ ಅನುಮತಿ ನೀಡುವ ಬಗ್ಗೆ ವಿಶೇಷ ಅಧಿಕಾರಿಯನ್ನು…

Read More

ದುರಸ್ತಿಯಾಗದ ರಸ್ತೆ : ರಸ್ತೆಯಲ್ಲೇ ಬಾಳೆ,ಅಡಿಕೆ,ಭತ್ತ ನಾಟಿ‌ಮಾಡುವ ಮೂಲಕ ಪ್ರತಿಭಟನೆ

ಹುಂಚಾ : ಇಲ್ಲಿನ ಸಮೀಪದ ವಾರಂಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಒಗ್ಗಟ್ಟಾಗಿ ಶಾಸಕ ಹಾಗೂ ಎಲ್ಲಾ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ. ತೀರ್ಥಹಳ್ಳಿ – ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ…

Read More

ಆಯನೂರು ಬಳಿ ಮರಕ್ಕೆ ಡಿಕ್ಕಿ‌ ಹೊಡೆದ ಖಾಸಗಿ ಬಸ್ : ಹಲವರಿಗೆ ಗಂಭೀರ ಗಾಯ

ಆಯನೂರು : ಇಲ್ಲಿನ ಸಮೀಪದ ಕದಂಬ ರೆಸ್ಟೋರೆಂಟ್ ಬಳಿ ಖಾಸಗಿ ಬಸ್ ಮರಕ್ಕೆ ಗುದ್ದಿ ಹಲವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗ ಕಡೆಗೆ ತೆರಳುತಿದ್ದ ಮಂಜುನಾಥ್ ಬಸ್  ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಚಾಮೇನಹಳ್ಳಿ ನಿವಾಸಿಗಳಾದ ಶಿಲ್ಪ(33) ಕೀರ್ತಿ(21) ಭೂಮಿಕಾ(21) ಮತ್ತು ಕಾವ್ಯಾ(21) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಮೂವರು ಶಿವಮೊಗ್ಗದ ಎಟಿ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಕುಂಸಿ ಪೊಲೀಸ್ ಠಾಣೆ…

Read More

ಲಾರಿ ಚಕ್ರ ತಲೆಯ ಮೇಲೆ ಹರಿದು ಅಪರಿಚಿತ ವ್ಯಕ್ತಿ ಸಾವು :

ಆನಂದಪುರ : ಪಟ್ಟಣದ ಸಂತೋಷ್ ರೈಸ್ ಮಿಲ್ ಮುಂಭಾಗದಲ್ಲಿ  ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ವ್ಯಕ್ತಿಯ ತಲೆಯ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದ್ದು,ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆನಂದಪುರದಿಂದ ಕೊಪ್ಪಳಕ್ಕೆ ಭತ್ತದ ಹೊಟ್ಟನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿದ್ದ  ಲಾರಿ ಅಪರಿಚಿತ ವ್ಯಕ್ತಿಯ  ತಲೆ ಮೇಲೆ ಹತ್ತಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ  ಭತ್ತದ ಹೊಟ್ಟು ತುಂಬಿಕೊಂಡು ಲಾರಿ ಹೊರಟ್ಟಿತ್ತು ಆದರೆ ಆಗ ಅಪರಿಚಿತ ವ್ಯಕ್ತಿ ಲಾರಿಯ ಕೆಳಗೆ…

Read More

ಅವಧೂತ ವಿನಯ್ ಗುರೂಜಿ ಜನ್ಮ ದಿನೋತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರ ಯಶಸ್ವಿ :

ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಡಿವೈಎಸ್ಪಿ ಶಾಂತವೀರ ಉದ್ಘಾಟನೆ ಮಾಡಿದರು. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ, ಪುನೀತ್ ಬ್ರಿಗೇಡ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆ, ರೋಟರಿ ಬ್ಲಡ್ ಬ್ಯಾಂಕ್, ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಭಾಗವಹಿಸಿ ರಕ್ತದಾನಿಗಳಿಗೆ ಶುಭ ಕೋರಿದರು….

Read More

ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ : ಹಲವರ ನಾಮಪತ್ರ ಸಲ್ಲಿಕೆ

ರಿಪ್ಪನ್‌ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘ (ರಿ) ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಹಲವು ನಾಮಪತ್ರ ಸಲ್ಲಿಕೆಯಾಯಿತು. ಸೆಪ್ಟೆಂಬರ್ 04 ರಂದು ನಿರ್ದೇಶಕ ಸ್ಥಾನದ ಚುನಾವಣೆ ನಡೆಯಲಿದ್ದು 15 ಕ್ಷೇತ್ರದಲ್ಲಿ ಚುನಾವಣೆಗೆ ಈಗಾಗಲೇ ಸಿದ್ದತೆ ಪ್ರಾರಂಭವಾಗಿದೆ. ರಿಪ್ಪನ್‌ಪೇಟೆ ಮತಕ್ಷೇತ್ರ ವ್ಯಾಪ್ತಿಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಮಾಜಿ‌ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಇಂದು ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗೆ ದುಡಿಯುವ ಹಂಬಲದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.ಸಮಾಜದ ಎಲ್ಲಾ ಬಾಂಧವರು ನನ್ನನ್ನು ಬೆಂಬಲಿಸುವ ಮೂಲಕ…

Read More

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ

ಸೊರಬ : ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ ಬಂದಿದೆ. ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರಾಘವೇಂದ್ರ ಟಿ., ಉಪಾಧ್ಯಕ್ಷರಾಗಿ ಹೊಸ ದಿಗಂತ ಪತ್ರಿಕೆ ವರದಿಗಾರ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಲೆನಾಡು ಮಿತ್ರ ಪತ್ರಿಕೆ ವರದಿಗಾರ ದಿನಕರ್ ಬಾವೆ, ಕಾರ್ಯದರ್ಶಿಯಾಗಿ ಕ್ರಾಂತಿದೀಪ ವರದಿಗಾರ ನೂಪಿ ಶಂಕರ್, ಖಜಾಂಚಿಯಾಗಿ ಕನ್ನಡಪ್ರಭ ವರದಿಗಾರ ಹೆಚ್.ಕೆ.ಬಿ. ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಶ್ರೀಪಾದ ಬಿಚ್ಚುಗತ್ತಿ ಅವರು…

Read More

ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಯ ಕುರಿತು ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ : ಆಕೆಗಾಗಿ ಲೆಟರ್ ಬರೆದವ ಈಗ ಪೊಲೀಸರ ಅತಿಥಿ

ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಭಾವಚಿತ್ರ ತೆರವುಗೊಳಿಸಿದ ವೇಳೆ ಉಂಟಾದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ನಡುವೆ ಕಳೆದ ಶನಿವಾರ ನಗರದಲ್ಲಿ ಅನಾಮದೇಯ ಪತ್ರವೊಂದು ಪತ್ತೆಯಾಗಿ ಭಾರಿ ತಲ್ಲಣ ಸೃಷ್ಠಿಸಿತ್ತು, ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸುವ ಜೊತೆಗೆ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಅನಾಮಧೇಯ ಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.. ಅಂದಹಾಗೆ ಈ ಪತ್ರ ಬರೆದಿರುವುದು ಕೂಡಾ ಆತನೇ.. ಕಾರಣ ಅದೇ ಊರಿನ ಫೈಜಲ್ ಎಂಬಾತನ…

Read More

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ದರ್ಪ : ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ

ತೀರ್ಥಹಳ್ಳಿ :  ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಸ್ಥಳೀಯ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಮೇಲಿನ ಕುರುವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಆರೋಪಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಛೇರಿ ಎದುರು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅವಿನಾಶ್ ರವರು ಕಳೆದ ಕೆಲ ದಿನಗಳಿಂದ ಮೇಲಿನ ಕುರುವಳ್ಳಿಯಲ್ಲಿನ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕಾರ್ಮಿಕರು ಕಷ್ಟ ಪಟ್ಟು…

Read More

ಬಾಳೂರು ಗ್ರಾಮದಲ್ಲಿ ಏಕಾಏಕಿ ಬಾಳೆ ಬೆಳೆ ನಾಶಕ್ಕೆ ಹೊರಟ ಅರಣ್ಯ ಇಲಾಖೆ : ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೀರೇಶ್ ಆಲುವಳ್ಳಿ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ  ಬಾಳೂರು ಗ್ರಾಮ ಸ ನಂ 14 ರಲ್ಲಿ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ  ಬೆಳೆದ ಬಾಳೆ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಲು ಮುಂದಾಗಿದ್ದರು.  ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಏಕಾಏಕಿ ಬಾಳೆ ಗೆಡ್ಡೆಗಳನ್ನು ಕಿತ್ತು,ಕೊಚ್ಚಿ ನಾಶಪಡಿಸುತ್ತಿರುವ ಘಟನೆಯನ್ನು ಖಂಡಿಸಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ನಂತರ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮ, ಸರ್ವೆ ನಂ 14 ರಲ್ಲಿ…

Read More