ಅವಧೂತ ವಿನಯ್ ಗುರೂಜಿಯವರ ಜನ್ಮ ದಿನೋತ್ಸವದ ಅಂಗವಾಗಿ ರಕ್ತದಾನ :

ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಅಗಸ್ಟ್ 24ರಂದು ತೀರ್ಥಹಳ್ಳಿ ತಾಲ್ಲೂಕಿನ ವೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ತೀರ್ಥಹಳ್ಳಿ ತಾಲ್ಲೂಕಿನ ರಕ್ತದಾನಿಗಳು, ಸಮಸ್ತ ಜನತೆ ಹಾಗೂ ಶ್ರೀ ವಿನಯ್ ಗುರೂಜಿಯವರ ಭಕ್ತರು ಸಮಸ್ತ ಜನತೆ ರಕ್ತದಾನ ಮಾಡಿ ಇನ್ನೊಂದು ಜೀವ ಕಾಪಾಡಲು ಮನವಿ ಮಾಡಲಾಗಿದೆ. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ…

Read More

ಜಮೀನಿಗೆ ಹೋಗಲು ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನಿಂದ ತಾಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹ :

ಹೊಸನಗರ: ತಮ್ಮ ಜಮೀನಿಗೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನೋರ್ವ ತಾಲೂಕು ಕಛೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಹೊಸನಗರ ತಾಲೂಕಿನ ಎಚ್.ಮಳವಳ್ಳಿ ನಿವಾಸಿ ಕೆ.ಯು ದಿನೇಶ್ ಅವರು, ತಮ್ಮ ಜಮೀನಿಗೆ ತೆರಳಲು ರಸ್ತೆ ಬಂದ್ ಮಾಡಲಾಗಿದೆ. ಈ ಬಗ್ಗೆ ವರ್ಷಗಳ ಕಾಲ ಹೋರಾಟ ನಡೆಸಿದರೂ ಅಧಿಕಾರಿವರ್ಗ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019ರಲ್ಲಿಯೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನ್ನ ಕೃಷಿ ಜಮೀನಿಗೆ ತೆರಳುವ ದಾರಿಗೆ ಅಡ್ಡಲಾಗಿ ಗ್ರಾಮದ ಇನ್ನೋರ್ವ ಕೃಷಿಕ…

Read More

ರಿಪ್ಪನ್‌ಪೇಟೆ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್ ಕಾಮತ್ ಅವಿರೋಧ ಆಯ್ಕೆ : ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಬೇಳೂರು

ರಿಪ್ಪನ್ ಪೇಟೆ : ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್.ಕಾಮತ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್‌ ಶಂಕರ್ ಶರಾಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಜುನಾಥ ಕಾಮತ್ (ಗೌರವಾಧ್ಯಕ್ಷರು), ಉಮೇಶ್‌ಭಟ್, ಸುಧೀಂದ್ರ ಪ್ರಭು (ಉಪಾಧ್ಯಕ್ಷರು), ಜೆ.ರಾಧಾಕೃಷ್ಣ (ಸಹಕಾರ್ಯದರ್ಶಿ), ಹರೀಶ್‌ಪ್ರಭು (ಸಂಘಟನಾ ಕಾರ್ಯದರ್ಶಿ), ಎಂ.ಆರ್.ಭಟ್ (ಖಜಾಂಚಿ) ಉಳಿದಂತೆ 20 ಕ್ಕೂ ಅಧಿಕ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಮಾಜಿ ಶಾಸಕ ಬೇಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯದ…

Read More

ಕ್ರೀಡಾಕೂಟದಲ್ಲಿ ನಡೆದ ಜಗಳ ಹಿನ್ನಲೆಯಲ್ಲಿ ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ : ಅಂಗಡಿಗಳು ಸಂಪೂರ್ಣ ಬಂದ್

ಶಿರಾಳಕೊಪ್ಪ : ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.  ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಕ್ರೀಡಾಂಗಣದಿಂದ ಹೊರ ಬಂದ ಒಂದು ಕೋಮಿನ ಯುವಕರ ಗುಂಪು ಮತ್ತೊಂದು…

Read More

ಯಕ್ಷಗಾನ ಕಲೆಗೆ ಸಾವಿರ ವರ್ಷದ ಇತಿಹಾಸವಿದೆ : ಶ್ವೇತ ಶ್ರೀಧರ್

ಹೊಸನಗರ : ಯಕ್ಷಗಾನ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ.ಕಲಾವಿದರು ತಮ್ಮ ಪ್ರತಿಭೆ ಯನ್ನು ಯಾವುದೇ ತಯಾರಿ ಇಲ್ಲದೆ ಕ್ಷಣ ಕ್ಷಣಕ್ಕೂ ಪ್ರದರ್ಶನ ನೀಡಿ..ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿ ಅರ್ಥ ಹೇಳುವ ಸ್ಪಷ್ಟ ಕನ್ನಡ ಉಚ್ಚಾರಣೆ ಮಾಡುವ ಕಲೆ…ಸಾಂಪ್ರದಾಯಿಕ, ಸಾಂಸ್ಕೃತಿಕ, ಕಲೆ ಯಕ್ಷಗಾನವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ರ್ಮೋಚಾ ಕಾರ್ಯದರ್ಶಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಶ್ವೇತ ಶ್ರೀಧರ್ ಹೇಳಿದರು. ಶುಕ್ರವಾರ  ಬೆಂಗಳೂರು ರವಿಂದ್ರ ಕಲಾ ಕ್ಷೇತ್ರದಲ್ಲಿ ಯಕ್ಷ ಮಿತ್ರ ಬಳಗ ಬೆಂಗಳೂರು ಹಾಗೂ ಕನ್ನಡ…

Read More

ಆನಂದಪುರ : ಮೂರು ಮುತ್ತು ಕಲಾವಿದರಿಗೆ ಕಸಾಪ ಹಾಗೂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಸನ್ಮಾನ

ಆನಂದಪುರ : ಮೂರು ಮುತ್ತು ಕಲಾವಿದರನ್ನು ಪಟ್ಟಣದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರೂಪಕಲಾ (ಕುಳ್ಳಪ್ಪು) ತಂಡದವರಿಂದ ಆನಂದಪುರ ಸಮೀಪದ ಮಲಂದೂರಿನಲ್ಲಿ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ  ಕಳೆದ 28 ವರ್ಷಗಳಿಂದ ದೇಶ ವಿದೇಶಗಳಲ್ಲೂ ಕನ್ನಡ  ಹಾಸ್ಯಮಯ ನಾಟಕ ಪ್ರದರ್ಶನಗಳನ್ನು ನಡೆಸಿರುವ ಕುಳ್ಳಪ್ಪು ತಂಡ ಇಲ್ಲಿಯ ತನಕ  2200 ನೇ ಮೂರು ಮುತ್ತು ನಾಟಕದ ಪ್ರದರ್ಶನ ಮಾಡಿರುತ್ತಾರೆ . ಇವರ ಸೇವೆಯನ್ನು ಗುರುತಿಸಿ …

Read More

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 65 ವರ್ಷದ ವೃದ್ದನಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ : ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 65 ವರ್ಷದ ವೃದ್ಧರೊಬ್ಬರಿಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ನಾಗಪ್ಪನಿಗೆ ರೂ. 60,000 ದಂಡವನ್ನು ಹಾಕಲಾಗಿದೆ. ಆರೋಪಿ ನಾಗಪ್ಪ 2020 ಸೆಪ್ಟೆಂಬರ್ 13 ರಂದು ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅಪ್ರಾಪ್ತ ಬಾಲಕಿ ಕೃಷಿ ಜಮೀನಿಗೆ ಹೋದಾಗ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಮಹಿಳಾ ಪೊಲೀಸರು ನಾಗಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಹಿಳಾ…

Read More

2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ : ಶಾರದ ಪೂರ್ಯನಾಯ್ಕ್

ಹೊಸನಗರ : 2023ರಲ್ಲಿ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಹೇಳಿದರು. ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜೆಡಿಎಸ್ ಪಕ್ಷವು ಬೇರೂರಿ ಅತ್ಯಂತ ಕ್ರಿಯಾಶೀಲವಾಗಿ ಇದ್ದದ್ದು ಈ ಹೊಸನಗರ ತಾಲ್ಲೂಕಿನಲ್ಲಿ ಕೆಲ ರಾಜಕೀಯ ಸ್ಥಿತ್ಯಂತರಗಳಿಗೆ ಕಾರ್ಯಕರ್ತರು ಚದುರಿದ್ದು ಅವರನ್ನು…

Read More

ಹುಂಚದಕಟ್ಟೆಯಲ್ಲಿ ಹಳ್ಳಿ ಭೇಟಿ ಮತ್ತು ಗ್ರಾಮ ವಾಸ್ತವ್ಯ : ಅಕ್ರಮ ಮದ್ಯ ಮಾರಾಟದ ವಿರುದ್ದ ಸಿಡಿದೆದ್ದ ಮಹಿಳೆಯರು,ತಬ್ಬಿಬ್ಬಾದ ಅಬಕಾರಿ ಅಧಿಕಾರಿ

ಮನೆ-ಮನೆಗಳಲ್ಲಿ ಆಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಯುವಜನಾಂಗ ಮತ್ತು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಶಾಲಾ ಅವರಣದ ತುಂಬ ಮಧ್ಯದ ಬಾಟಲ್ ಮತ್ತು ಪೌಚು ಪ್ಯಾಕೇಟ್‌ಗಳ ರಾಶಿಯೇ ಬಿದ್ದಿರುತ್ತದೆ ಶಾಲೆ ಅರಂಭಕ್ಕೂ ಮುನ್ನ ಮಕ್ಕಳಿದ ಅದನ್ನು ಅರಿಸುವುದೇ ಕೆಲಸವಾಗಿದೆ.ಈ ಬಗ್ಗೆ ಗ್ರಾಮ ಸಭೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ  ಅಬಕಾರಿ ಅಧಿಕಾರಿಗಳು ಅಂಗಡಿ ಮನೆಗಳ ಬಳಿ ಬಂದು ಹಪ್ತಾ ವಸೂಲಿ ಮಾಡಿಕೊಂಡು ಹೋಗುತ್ತಾರೆಯೇ ಹೊರತು ಮಧ್ಯಮಾರಾಟ ತಡೆಯುತ್ತಿಲ್ಲ ಎಂದು ಅಬಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಮಹಿಳೆಯರು ಗರಂ ಅಗುವ ಮೂಲಕ…

Read More

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬ್ಯಾಂಕ್ ಉದ್ಯೋಗಿ ಸಾವು

ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತವಾಗಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ನಡೆದಿದೆ. ಬ್ಯಾಕೋಡು ಸಮೀಪದ ಸುಳ್ಳಳ್ಳಿ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಕಿಶನ್ (34) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಾಗರದಿಂದ ಸುಳ್ಳಳ್ಳಿ ಬ್ಯಾಂಕ್ ಗೆ ತೆರಳುವಾಗ ಈ ಅಪಘಾತ ಬ್ಯಾಕೋಡು ಸಮೀಪ ಸಂಭವಿಸಿದೆ. ಅಪಘಾತದ ಸಂದರ್ಭದಲ್ಲಿ ಕಿಶನ್ ಗೆ ತೀವ್ರ ರಕ್ತಸ್ರಾವವಾಗಿದ್ದು ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More