ಮನೆ-ಮನೆಗಳಲ್ಲಿ ಆಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಯುವಜನಾಂಗ ಮತ್ತು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಶಾಲಾ ಅವರಣದ ತುಂಬ ಮಧ್ಯದ ಬಾಟಲ್ ಮತ್ತು ಪೌಚು ಪ್ಯಾಕೇಟ್‌ಗಳ ರಾಶಿಯೇ ಬಿದ್ದಿರುತ್ತದೆ ಶಾಲೆ ಅರಂಭಕ್ಕೂ ಮುನ್ನ ಮಕ್ಕಳಿದ ಅದನ್ನು ಅರಿಸುವುದೇ ಕೆಲಸವಾಗಿದೆ.ಈ ಬಗ್ಗೆ ಗ್ರಾಮ ಸಭೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಅಬಕಾರಿ ಅಧಿಕಾರಿಗಳು ಅಂಗಡಿ ಮನೆಗಳ ಬಳಿ ಬಂದು ಹಪ್ತಾ ವಸೂಲಿ ಮಾಡಿಕೊಂಡು ಹೋಗುತ್ತಾರೆಯೇ ಹೊರತು ಮಧ್ಯಮಾರಾಟ ತಡೆಯುತ್ತಿಲ್ಲ ಎಂದು ಅಬಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಮಹಿಳೆಯರು ಗರಂ ಅಗುವ ಮೂಲಕ ತಮ್ಮ ಆಕ್ರೋಶವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ವ್ಯಕ್ತಪಡಿಸಿದಾಗ ಅಬಕಾರಿ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾದ ಘಟನೆ ಸಮೀಪದ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ.
ರಾಜ್ಯ ಸರ್ಕಾರದ ಆದೇಶದಂತೆ ಹಳ್ಳಿ ಬೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದಂತೆ ಇಂದು ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ಹುಂಚದಕಟ್ಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ತಹಶೀಲ್ದಾರ್ ಅಮೃತ ಅತ್ರೇಶ್ ಅಧ್ಯಕ್ಷತೆಯಲ್ಲಿ ನಡೆದ ಹಳ್ಳಿ ಭೇಟಿ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರ ಅಹವಾಲುಗಳ ಸ್ವೀಕಾರ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಏಕಾಕಾಲದಲ್ಲಿ ಅಬಕಾರಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳುವ ಮೂಲಕ ಹಣ್ಣುಗಾಯಿ ನೀರುಗಾಯಿಯನ್ನಾಗಿಸಿದರು.
ತಾವು ಎಷ್ಟು ಕೇಸ್ ದಾಖಲಿಸಿದ್ದೀರಿ ಮನೆಮನೆಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ತಾವು ಬಂದು ಮಧ್ಯಮಾರಾಟವನ್ನು ತಡೆಯದೆ ಅವರು ಕೊಡುವ ಹಪ್ತಾ ವಸೂಲಿ ಮಾಡಿಕೊಂಡು ಹೋಗುತ್ತೀರಾ ಈಗ ನಮಗೆ ಸ್ಪಷ್ಟ ಉತ್ತರ ಕೊಡಿ ಎಂದು ಪಟ್ಟು ಹಿಡಿದರು.ಆಗ ಉತ್ತರಿಸಲು ತಡವರಿಸಿದ ಅಬಕಾರಿ ಅಧಿಕಾರಿಯನ್ನು ಗಮನಿಸಿದ ತಹಶೀಲ್ದಾರ್ ಕೊಡಲೇ ಮಧ್ಯ ಪ್ರವೇಶಿಸಿ ಇನೊಂದು ವಾರದೊಳಗೆ ಗ್ರಾಮದಲ್ಲಿ ಅಕ್ರಮ ಮಧ್ಯಮಾರಾಟವನ್ನು ಬಂದ್ ಮಾಡುವುದಾಗಿ ಭರವಸೆ ನೀಡಿ ಮಹಿಳೆಯರನ್ನು ಸಮದಾನಿಸುವ ನಿಟ್ಟನಲ್ಲಿ ಹರಸಾಹಸ ಪಡುವಂತಾಯಿತು.
ರಾಜ್ಯ ಹೆದ್ದಾರಿ ಅಂಚಿನಲ್ಲಿ ಕೆಲವು ಸಾಲುಮರಗಳು ಒಣಗಿ ಅಪಾಯದ ಸ್ಥಿತಿಯಲ್ಲಿವೆ ಅದನ್ನು ಕಡಿತಲೆ ಮಾಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾದರೂ ನಿರ್ಲಕ್ಷö್ಯ ವಹಿಸಿದ್ದಾರೆಂದು
ಗ್ರಾಮಸ್ಥರು ಪ್ರಶ್ನಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಅರ್ಜಿ ಕೊಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕಡಿತಲೆ ಮಾಡುವುದಾಗಿ ಹೇಳಿದಾಗ ಅಕ್ರೋಶಗೊಂಡ ಸಾರ್ವಜನಿಕರು ಅರಣ್ಯದಲ್ಲಿ ಅಕ್ರಮ ಮರಕಡಿತಲೆ ಮಾಡಿಕೊಂಡು ಹೋದರೆ ಏನು ಮಾಡದ ನೀವು ಅದೇ ಯಾರು ರೈತ ತನ್ನ ಮನೆ ಬಳಕೆಗೆಂದು ಮರಕಡಿದರೆ ಮನೆಗೆ ನುಗ್ಗುತೀರಾ ಅಗ ಹಿರಿಯ ಅಧಿಕಾರಿಗಳ ಅನುಮತಿ ಬೇಡಾವಾ ಎಂದು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಹುಂಚದ ಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಹಿಂದು ರುದ್ರಭೂಮಿಗೆ ಜಾಗ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲಾಗಿ ಒಂದು ಗ್ರಾಮಕ್ಕೆ ಜಾಗ ಮಂಜೂರು ಮಾಡಿದ್ದೀರಾ ಉಳಿದ ನಾಲ್ಕು ಗ್ರಾಮಗಳ ರುದ್ರಭುಮಿಗೆ ಜಾಗ ಮಂಜೂರು ಮಾಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ತಹಶೀಲ್ದಾರ್ ಉತ್ತರಿಸಿ ಅತಿ ಶೀಘ್ರದಲ್ಲಿ ಜಾಗ ಮಂಜೂರು ಮಾಡಲಾಗುವುದೆಂದರು.
ಅಲ್ಲದೆ ಅರಣ್ಯ ಇಲಾಖೆಯವರು ತಮ್ಮ ಗಡಿ ಜಾಗದಲ್ಲಿ ಚರಂಡಿ ತಗೆಯಲಾಗಿದ್ದು ಸರಿಯಾಗಿ ಕೆಳಭಾಗಕ್ಕೆ ನೀರು ಹರಿದುಹೋಗದೆ ಮನೆಗಳಿಗೆ ನುಗ್ಗುವಂತಾಗಿದೆ ಈ ಬಗ್ಗೆ ಕ್ರಮ ಕೈಗೊಂಡು ನ್ಯಾಯಕೊಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು ಅಗ ತಕ್ಷಣ ಪರಿಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ಮಲೆನಾಡಿನ ಪ್ರದೇಶವಾಗಿರುವ ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಗರ್‌ಹುಕುಂ ಅರಣ್ಯ ಜಮೀನು ಮತ್ತು ಗೋಮಾಳ ಹುಲ್ಲುಬನ್ನಿ ಸೇರಿದಂತೆ ಜಾನುವಾರುಗಳಿಗೆ ಮೀಸಲು ಅರಣ್ಯ ಹೀಗೆ ಸಾಕಷ್ಟು ಸಮಸ್ಯೆಗಳ ಕುರಿತು ಗಮನಸೆಳೆದಾಗ ಸಮದಾನದಿಂದಲೇ ಉತ್ತರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅರಣ್ಯ ಪ್ರಾಣಿಸಂಕುಲಗಳ ರಕ್ಷಣೆ ಹೀಗೆ ಪರಿಸರ ರಕ್ಷಣಗಾಗಿ ಜಮೀನ ಮೀಸಲಾಗಿಡಲಾಗಿದೆ ಅದಷ್ಟು ಬೇಗ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಹುಂಚದ ಕಟ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಹೆಚ್.ಅರ್, ಉಪಾಧ್ಯಕ್ಷೆ ಶೋಭಾ ರೇಣುಕಪ್ಪ,ಚೇತನ್,ಧರ್ಮಣ್ಣ, ಕಲಾವತಿ,ಸೌಮ್ಯ,ಸುಜಾತ,ಶೃತಿ,ಶಿವಾನಂದ,ಕಂದಾಯ ಪಶು ಅರೋಗ್ಯ ಅರಣ್ಯ ಅಬಕಾರಿ ಶಿಶುಕಲ್ಯಾಣಾಭಿವೃದ್ದಿ ಇಲಾಖೆ ಅಂಗನವಾಡಿ ಗ್ರಾಮಾಡಳಿತ ವಿವಿಧ ಇಲಾಖೆ ಅಧಿಕಾರಿಗಳುಪಿಡಿಓ ಷಣ್ಮುಖಪ್ಪ ಕಟ್ಟೆ ಮಹೇಶ್,ಪಾಲ್ಗೊಂಡಿದ್ದರು.