POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ : ಹಲವರ ನಾಮಪತ್ರ ಸಲ್ಲಿಕೆ

ರಿಪ್ಪನ್‌ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘ (ರಿ) ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಹಲವು ನಾಮಪತ್ರ ಸಲ್ಲಿಕೆಯಾಯಿತು.


ಸೆಪ್ಟೆಂಬರ್ 04 ರಂದು ನಿರ್ದೇಶಕ ಸ್ಥಾನದ ಚುನಾವಣೆ ನಡೆಯಲಿದ್ದು 15 ಕ್ಷೇತ್ರದಲ್ಲಿ ಚುನಾವಣೆಗೆ ಈಗಾಗಲೇ ಸಿದ್ದತೆ ಪ್ರಾರಂಭವಾಗಿದೆ.


ರಿಪ್ಪನ್‌ಪೇಟೆ ಮತಕ್ಷೇತ್ರ ವ್ಯಾಪ್ತಿಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಮಾಜಿ‌ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಇಂದು ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗೆ ದುಡಿಯುವ ಹಂಬಲದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.ಸಮಾಜದ ಎಲ್ಲಾ ಬಾಂಧವರು ನನ್ನನ್ನು ಬೆಂಬಲಿಸುವ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ಸೃಷ್ಟಿಸಲು ಸಹಕರಿಸಬೇಕು ಎಂದು ಮನವಿ‌ ಮಾಡಿದರು.

ರಿಪ್ಪನ್‌ಪೇಟೆ ಮತಕ್ಷೇತ್ರದಲ್ಲಿ ಎರಡು ಸ್ಥಾನವಿದ್ದು ಮತ್ತೊಂದು ಸ್ಥಾನಕ್ಕೆ ಗೋವಿಂದೆಗೌಡ ರವರು ನಾಮಪತ್ರ ಸಲ್ಲಿಸಿದರು.

ಕೆರೆಹಳ್ಳಿ ಕ್ಷೇತ್ರಕ್ಕೆ ದೇವರಾಜ್ ಕೆರೆಹಳ್ಳಿ ನಾಮಪತ್ರ ಸಲ್ಲಿಕೆ :

ಹೊಸನಗರ ತಾಲೂಕು ಒಕ್ಕಲಿಗರ ಸಂಘ (ರಿ) ರಿಪ್ಪನ್‌ಪೇಟೆ

ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ದೇವರಾಜ್ ಕೆರೆಹಳ್ಳಿ ರವರು ನಾಮಪತ್ರ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.