ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಯ ಕುರಿತು ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ : ಆಕೆಗಾಗಿ ಲೆಟರ್ ಬರೆದವ ಈಗ ಪೊಲೀಸರ ಅತಿಥಿ

ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಭಾವಚಿತ್ರ ತೆರವುಗೊಳಿಸಿದ ವೇಳೆ ಉಂಟಾದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ನಡುವೆ ಕಳೆದ ಶನಿವಾರ ನಗರದಲ್ಲಿ ಅನಾಮದೇಯ ಪತ್ರವೊಂದು ಪತ್ತೆಯಾಗಿ ಭಾರಿ ತಲ್ಲಣ ಸೃಷ್ಠಿಸಿತ್ತು, ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸುವ ಜೊತೆಗೆ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಅನಾಮಧೇಯ ಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ..

ಅಂದಹಾಗೆ ಈ ಪತ್ರ ಬರೆದಿರುವುದು ಕೂಡಾ ಆತನೇ.. ಕಾರಣ ಅದೇ ಊರಿನ ಫೈಜಲ್ ಎಂಬಾತನ ಪತ್ನಿಯನ್ನು ಅಯೂಬ್ ಪ್ರೀತಿಸುತಿದ್ದನಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿದ್ದು ಹೇಗಾದರೂ ಮಾಡಿ ಫೈಜಲ್ ನನ್ನು ಜೈಲಿಗೆ ಅಟ್ಟಿ ಆತನ ಪತ್ನಿ ಜೊತೆಗೆ ಸುಖವಾಗಿ ಇರಬಹುದು ಎಂದು ಪ್ಲಾನ್ ಮಾಡಿದ್ದನಂತೆ ಅದಕ್ಕೆ ಸರಿಯಾಗಿ ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ವಿಚಾರದಲ್ಲಿ ಉಂಟಾದ ಗಲಭೆಯನ್ನು ಫೈಜಲ್ ಮೇಲೆ ಹಾಕಿ ಗಣೇಶ ಹಬ್ಬದ ಸಂದರ್ಭ ಕೋಮು ಗಲಭೆ ಎಬ್ಬಿಸುವ ರೀತಿಯಲ್ಲಿ ಏನಾದರು ಮಾಡಬೇಕೆಂದು ಸಂಚು ರೂಪಿಸಿ ಅಯೂಬ್ ಪತ್ರ ಬರೆದು ಜೈಲಿಗಟ್ಟುವ ಪ್ಲಾನ್ ಮಾಡಿದ್ದ.. ಆದರೆ ಕೊನೆಗೆ ತಾನು ಹೆಣೆದ ಬಲೆಗೆ ತಾನೆ ಬಿದ್ದು ಜೈಲು ಸೇರಿದ್ದಾನೆ.


ಕಳೆದ ಶನಿವಾರ ರಾತ್ರಿ ಗಾಂಧಿ ಬಜಾರ್ ನಿವಾಸಿ ಪ್ರಶಾಂತ್ ಅವರು ತನ್ನ ಅಂಗಡಿ ಬಂದ್ ಮಾಡಿ ದೇವಸ್ಥಾನದ ಲೈಟ್ ಬಂದ್ ಮಾಡಲು ತೆರಳುತ್ತಿದ್ದ ವೇಳೆ ದೇವಸ್ಥಾನದ ಎದುರು ಕವರ್ ಪತ್ತೆಯಾಗಿದ್ದು ಅದರೊಳಗೆ ಇದ್ದ ಪತ್ರದಲ್ಲಿ ಗಣೇಶ ಹಬ್ಬದ ದಿನ ನಡೆಯುವ ಕೋಮುಗಲಭೆ ನಿಲ್ಲಿಸಿ ಹಾಗೂ ಮೂವರ ಜೀವ ಉಳಿಸಿ ಎಂದು ಬರೆಯಲಾಗಿತ್ತು.


ಪತ್ರದಲ್ಲಿದ್ದ ವಿವರ :

ಓರ್ವ ಮಾರ್ವಾಡಿಯನ್ನ ಅರ್ಧಂಬರ್ಧ ಕೊಲೆ ಮಾಡಲಾಗಿದೆ ಆತನನ್ನ ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ, ಉದ್ದಿಮೆದಾರ ಹಾಗೂ ಹರ್ಷನ ಸಹಚರನನ್ನ ಕೊಲೆಯಾಗಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುತ್ತಿದ್ದವರು ಈ ಬಗ್ಗೆ ಮಾತನಾಡಿಕೊಂಡಿರುವುದನ್ನ ನಾನು ಕೇಳಿಸಿಕೊಂಡು ಭಯಭೀತಿಯಾಗಿದ್ದೇನೆ ಅಲ್ಲದೆ ಈ ಕಾರ್ಯಕ್ಕೆ ಮೂವರನ್ನ ಮಂಗಳೂರಿನಿಂದ ಕರೆಸಬೇಕು ಎಂದು ಮಾತನಾಡಿಕೊಂಡಿದ್ದಾರೆ. ಕೃತ್ಯದ ವೇಳೆ ಮೊಬೈಲ್ ಫೋನ್ ಜೊತೆಗೆ ಯಾವುದೇ ವಾಹನ ಬಳಸಬಾರದು ಅಲ್ಲದೆ ಯಾವುದೇ ಕಾರಣಕ್ಕೂ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೆ ಮಾತ್ರ ಗಣೇಶ ಹಬ್ಬ ನಿಲ್ಲಿಸಲು ಸಾಧ್ಯ ಎಂದು ಮಾತನಾಡುತ್ತಿದ್ದರು ಬಳಿಕ ನಾನು ಕಷ್ಟಪಟ್ಟು ಆ ವ್ಯಕ್ತಿಗಳು ಯಾರೆಂದು ನೋಡಿದಾಗ ಓರ್ವ ಮೊಹ್ಮದ್ ಫೈಜಲ್ ಎಂಬಾತನಾಗಿದ್ದ ಆತ ನನ್ನ ಪರಿಚಿತನೇ ಆಗಿದ್ದ ಆತನ ಹೆಸರು ಫೈಸಲ್, ಈತ ಗಾಂಜಾ ಮಾರಾಟ ಮಾಡುವುದು ಜೊತೆಗೆ ಗಾಂಜಾ ಸೇವನೆಯನ್ನೂ ಮಾಡುತ್ತಾನೆ ಅಲ್ಲದೆ ಈತ ಆಜಾದ್ ನಗರದಲ್ಲಿ ರೌಡಿಸಂ ಮಾಡಿಕೊಂಡು ಇದ್ದವನು. ಹಾಗಾಗಿ ಪೊಲೀಸರು ಈತನನ್ನು ಬಂಧಿಸಿ ಮುಂದೆ ನಡೆಯುವ ಗಲಭೆಯನ್ನು ನಿಯಂತ್ರಿಸಬಹುದು ಎಂದು ಬರೆದಿದ್ದ.

ಘಟನೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಫೈಜಲ್ ನನ್ನು ವಿಚಾರಣೆ ನಡೆಸಿದ ವೇಳೆ ತನ್ನ ಪತ್ನಿಯ ಜೊತೆ ಅಯೂಬ್ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿದೆ, ಬಳಿಕ ಪೊಲೀಸರು ಅಯೂಬ್ ನನ್ನು ವಿಚಾರಣೆ ನಡೆಸಿದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *