ರಿಪ್ಪನ್ ಪೇಟೆ ಸುತ್ತಮುತ್ತ ತಪ್ಪದ ಕಾಡಾನೆ ಉಪಟಳ : ಮತ್ತೆ ಮತ್ತೆ ದಾಳಿ ಮಾಡಿ ರೈತರನ್ನು ಕಂಗೆಡಿಸಿರುವ ಕಾಡಾನೆಗಳು
ರಿಪ್ಪನ್‌ಪೇಟೆ: ಕಳೆದ ಕೆಲವು ತಿಂಗಳುಗಳಿಂದ ಹೆದ್ದಾರಿಪುರ, ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲಭಾಗದಲ್ಲಿ ತೋಟಗಳಿಗೆ ದಾಳಿಯಿಟ್ಟು ಜನರಿಗೆ ನಿದ್ರೆಗೆಡಿಸಿದ್ದ ಕಾಡಾನೆಗಳು ಈಗ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಉಪಟಳ ನೀಡುತ್ತಿವೆ. ಸೋಮವಾರ ರಾತ್ರಿ ನರ‍್ಲಿಗೆಯ ರೈತರೊಬ್ಬರ ಬಾಳೆ ತೋಟದಲ್ಲಿ ಪ್ರತ್ಯಕ್ಷವಾದ ಕಾಡಾನೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವಾಹನದತ್ತ ಕಾಡಾನೆ ಧಾವಿಸಿದ್ದು, ಸಿಬ್ಬಂದಿಗಳು ಬೆದರು ಗುಂಡುಗಳನ್ನು ಹಾರಿಸುವ ಮೂಲಕ ಆನೆಯನ್ನು ಓಡಿಸಿದ್ದಾರೆ. ಬೆದರಿಸಿರುವ ಕಾರಣದಿಂದ ಮುಂದೆ ಸಾಗಿ ಚಾಣಬೈಲು ಗ್ರಾಮದ ದಿನೇಶ್‌ರವರ ತೋಟಕ್ಕೆ…