ರಿಪ್ಪನ್ ಪೇಟೆ : ಹೊಸನಗರ ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ ಎಂದು ಖ್ಯಾತಿ ಪಡೆದಿರುವ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿನ ಆಟೋ ನಿಲ್ದಾಣ ಈ ವರ್ಷದ ಮೊದಲ ವರ್ಷಧಾರೆಗೆ ಈಜುಕೊಳದಂತಾಯಿತು.
ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಸುಸಜ್ಜಿತ ಆಟೋ ನಿಲ್ದಾಣ ಮಳೆ ಬಂದರೆ ಸಾಕು ಈಜುಕೊಳ ದಂತಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮಾಡಳಿತಕ್ಕೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಆಟೋ ಚಾಲಕರುಗಳು ಮಾಲೀಕರು ಹಾಗೂ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು ಸಹ ನೀರು ಸರಾಗವಾಗಿ ಹರಿದಾಡುವುದಕ್ಕೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಇದ್ದುದರಿಂದ ಇಂದು ಸುರಿದ ವರ್ಷದ ಮೊದಲ ವರ್ಷಧಾರೆಗೆ ರಿಪ್ಪನ್ ಪೇಟೆ ಪಟ್ಟಣದ ಆಟೋ ನಿಲ್ದಾಣ ಈಜುಕೊಳ ದಂತಾಗಿ ಬೇರೆ ಬೇರೆ ಊರಿನಿಂದ ಬಂದು ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಾಯಿತು.
ಇನ್ನಾದರೂ ರಿಪ್ಪನ್ ಪೇಟೆ ಪಟ್ಟಣದ ಗ್ರಾಮಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಮಳೆ ಬಂದರೆ ಸಾಕು ಈಜುಕೊಳದಂತಾಗುವ ರಿಪ್ಪನ್ ಪೇಟೆ ಆಟೋ ನಿಲ್ದಾಣಕ್ಕೆ ಮುಕ್ತಿ ಕೊಡುತ್ತಾರೋ ಕಾದುನೋಡಬೇಕು…..!
ಮಳೆ ನಿರ್ಮಿತ ಈಜುಕೊಳದ ವೀಡಿಯೋ ಇಲ್ಲಿ ವೀಕ್ಷಿಸಿ👇👇👇