ಅದ್ದೂರಿಯಾಗಿ ನಡೆಯಿತು ರಿಪ್ಪನ್ ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಠಾವರ್ಧಂತಿ ಮಹೋತ್ಸವ
ರಿಪ್ಪನ್‍ಪೇಟೆ:-ಇಲ್ಲಿನ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 19ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಸುಸಂಪನ್ನ ಗೊಂಡಿತು. ಹರತಾಳು ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಅರ್ಚಕ ವೃಂದದವರಿಂದ ಇಂದು ಬೆಳಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ ನವಕಪ್ರದಾನ ಕಳಸ ಕಲಶಾಭಿಷೇಕ ಆದಿವಾಸ ಹೋಮ ಪವಮಾನ ಅಭಿಷೇಕ ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ಜರುಗಿತು. ಈ ಸಂದರ್ಭದಲ್ಲಿ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾಪನೆಗೂ ಮೊದಲು…