ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಕಾಡಾನೆಯ ಹಾವಳಿಯೂ ಹೆಚ್ಚಾಗಿದ್ದು ಹಲವಾರು ರೈತರುಗಳ ಅಡಿಕೆ ತೋಟವನ್ನು ಹಾಗೂ ಬಾಳೆಯ ತೋಟವನ್ನು ಕಾಡಾನೆಗಳು ಹಾಳುಗೆಡವಿ ನಾಶ ಮಾಡಿದ್ದು ಬೆಳೆಗಳನ್ನು ಬೆಳೆದ ರೈತರುಗಳಿಗೆ ಸಾವಿರಾರು ರೂಪಾಯಿಗಳ ನಷ್ಟ ವಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಸರಕಾರ ಕಾಡಾನೆ ಹಾವಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕೆಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್ ಎಂ.ಮಂಜುನಾಥ್ ಗೌಡ ಒತ್ತಾಯಿಸಿದ್ದಾರೆ.
ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಕಾಡಾನೆ ಹಾವಳಿ ಯಿಂದ ನಷ್ಟಕ್ಕೊಳಗಾದ ರೈತರ ತೋಟಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನಂತರ ಮಾಧ್ಯಮದವರಿಗೆ ಮಾತನಾಡಿದ ಅವರು ಕಳೆದ ಕೆಲವು ದಿನಗಳಿಂದ ಕಳಲೆ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು ಅನೇಕ ರೈತರುಗಳ ಸಾಕಷ್ಟು ತೋಟಗಳು ಹಾನಿಗೊಳಗಾಗಿ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸಿದೆ ಈ ಕುರಿತು ಹಲವಾರು ಬಾರಿ ರೈತರುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಸಹ ಗಮನಹರಿಸದೆ ರೈತರುಗಳ ಬೆಳೆಗಳ ನಷ್ಟಕ್ಕೆ ಕಾರಣರಾಗಿದ್ದಾರೆ.ರೈತರಿಗೆ ಪರಿಹಾರ ನೀಡುವುದರೊಂದಿಗೆ ಕೊಡಗು ಮಾದರಿಯಲ್ಲಿ ಕಾಡನೆಯಿಂದ ರಕ್ಷಣೆ ಪಡೆಯಲು ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದರು.
ಈ ಸಂಬಂಧ ಸ್ಥಳದಿಂದಲೇ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಪ್ ಒ ಐ ಎಂ ನಾಗರಾಜ್ ಗೆ ಕರೆ ಮಾಡಿ ವಸ್ತುಸ್ಥಿತಿ ವಿವರಿಸಿ ಕೂಡಲೇ ಆನೆಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
ನಂತರ ಸಕ್ರೆಬೈಲಿನಿಂದ ಕಾರ್ಯಾಚರಣೆಗೆ ಬಂದಿರುವ ಮೂರು ಪರಿಣಿತ ಆನೆಗಳಾದ ಭಾನುಮತಿ,ಸೋಮಣ್ಣ ಹಾಗೂ ರಾಘವೇಂದ್ರ ಇರುವ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಬಗ್ಗೆ ಡಾ| ವಿನಯ್ ಬಳಿ ಸಂಪೂರ್ಣ ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ,ರಿಪ್ಪನ್ ಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಹೆದ್ದಾರಿಪುರ ಗ್ರಾಪಂ ಸದಸ್ಯರಾದ ಪ್ರವೀಣ್ ಸುಳುಗೋಡು,ಮುಖಂಡರಾದ ಡಾಕಪ್ಪ,ಮಳವಳ್ಳಿ ಮಂಜುನಾಥ್,ಉಲ್ಲಾಸ್ ತೆಂಕೋಲ್,
ರೈತ ಮುಖಂಡರಾದ ಈಶ್ವರಪ್ಪ ಗೌಡ ಕುಕ್ಕಳಲೆ,ಚಂದ್ರಶೇಖರ್ ಮಳವಳ್ಳಿ,ವಿಜಯ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇