ಪೆಟ್ರೋಲ್ ಟ್ಯಾಂಕರ್ ಪಲ್ಟಿ : ಜೀವ ಭಯ ಬಿಟ್ಟು ಪೆಟ್ರೋಲ್ ತುಂಬಿಸಿಕೊಳ್ಳಲು ಜನರಿಂದ ನೂಕುನುಗ್ಗಲು
ಶಿವಮೊಗ್ಗ: ಜಾವಳ್ಳಿ ಸಮೀಪದಲ್ಲಿ ಇಂದು ಮದ್ಯಾಹ್ನ ಪೆಟ್ರೋಲ್ ತುಂಬಿದ ಟ್ಯಾಂಕರ್‌ವೊಂದು ಪಲ್ಟಿಯಾಗಿರುವ ಘಟನೆ ವರದಿಯಾಗಿದೆ. ಜಾವಳ್ಳಿ ಅರಬಿಂದೂ ಶಾಲೆಯ ಸಮೀಪ ಸೊಲ್ಲಾಪುರ ಮತ್ತು ಮಂಗಳೂರು ಹೈವೆ ರಸ್ತೆಯಲ್ಲಿ ಸಾಗುತ್ತಿದ್ದ ಪೆಟ್ರೋಲ್ ತುಂಬಿದ ಲಾರಿಯೊದು ಪಕ್ಕಕ್ಕೆ ಉರುಳಿ ಬಿದ್ದಿದೆ. ಮಂಗಳೂರಿನಿಂದ 12½ ಸಾವಿರ ಲೀಟರ್ ಪೆಟ್ರೋಲ್ ನ್ನ ಹೊತ್ತು ಹೋಗುತ್ತಿದ್ದ ಲಾರಿ ರಸ್ತೆಗೆ ಉರುಳಿದೆ. ಅಕ್ಕಪಕ್ಕದ ಜನ ಕೊಡಪಾನ ಬಕೆಟ್ ನಲ್ಲಿ ತುಂಬಿಸಿಕೊಂಡು ಹೋಗಿರುವಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಪೊಲೀಸರು ಬಂದು ಸಾರ್ವಜನಿಕರನ್ನ ಚದುರಿಸಿದ್ದಾರೆ. ಟ್ಯಾಂಕರ್ ಪಲ್ಟಿಯಾದ ಸಮಯದಲ್ಲಿ ಜನರು…