ಹಾವು ಕಚ್ಚಿ ಗೃಹಿಣಿ ಸಾವು :
ಹೊಸನಗರ ಪಟ್ಟಣದ ಸಮೀಪದ ಮೇಲಿನಬೆಸಿಗೆ ಗ್ರಾಮದ ಮಹಿಳೆಯೊಬ್ಬಳಿಗೆ ಅಡುಗೆ ಮನೆಯಲ್ಲಿ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮೇಲಿನಬೆಸಿಗೆ ನಿವಾಸಿ ನಾಗರಾಜ್ ಎಂಬುವವರ ಪತ್ನಿ ಸೌಮ್ಯ (24) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸೌಮ್ಯ ಬುಧವಾರ ಮಧ್ಯಾಹ್ನ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದಾಗ ಅವರ ಕಾಲಿಗೆ ಹಾವು ಕಚ್ಚಿದ್ದು ಅವರ ಗಮನಕ್ಕೆ ಬಂದಿರಲಿಲ್ಲ.ಕೆಲ ಹೊತ್ತಿನಲ್ಲಿಯೇ ಹಾವು ಕಚ್ಚಿದ ಜಾಗದಲ್ಲಿ ತೀವ್ರತರ ಬಾಧೆಯಾಗಲು ಶುರುವಾದಗ ಮನೆಯವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮನೆಯವರು ಹಾವು ಕಚ್ಚಿರಬೇಕೆಂಬ ಶಂಕೆಯಿಂದ…