ತೀರ್ಥಹಳ್ಳಿಯಲ್ಲಿ ಗುಂಡಿನ ಸದ್ದು : ನೊಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಸಾವು
ಬೇಟೆಯಾಡಲು ಹೋದವರಿಂದ ಹಾರಿದ ಗುಂಡೊಂದು ಮಾಜಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನನ್ನ ಬಲಿಪಡೆದಿದೆ.ಈ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ ನೊಣಬೂರು ಮತ್ತು ಅರಳಸುರಳಿ ಗ್ರಾಮ ಪಂಚಾಯಿತಿ ನಡುವಿನ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಬಂದಿದ್ದವರಿಂದ ಹಾರಿದ ಗುಂಡೊಂದು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ನಿಗೆ ತಗುಲಿದೆ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾಂತರಾಜು(38) ಎಂಬುವರು ಗುಂಡಿಗೆ ಬಲಿಯಾಗಿದ್ದಾರೆ. 12 ಜನರ ಗುಂಪೊಂದು ಬೆಟೆಯಾಡಲು ಹೋಗಿ ಮಿಸ್ ಫೈರ್ ಆಗಿ ಕಾಂತರಾಜು ಸಾವಿಗೆ ಕಾರಣ ಎನ್ನಲಾಗುತ್ತಿದೆ. ಗುಂಡು ಹಾರಿಸಿದ 12 ಜನರು ಯಾರು…