ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರಂಬಳ್ಳಿ ಗ್ರಾಮದ ಸೀತಮ್ಮ(64) ಇಂದು ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತಿ ಚೂಡಪ್ಪ ಮಕ್ಕಳಾದ ಕೆ ಸಿ ಗಿರೀಶ್ , ಅಬಕಾರಿ ನಿರೀಕ್ಷಕರು ಉಡುಪಿ. ಮತ್ತೋರ್ವ ಮಗ ಪ್ರಕಾಶ್ ಪುತ್ರಿ ಚೇತನಾ ಹಾಗೂ ಸಹೋದರ ಸಹೋದರಿಯರನ್ನು ಬಿಟ್ಟು ಅಗಲಿದ್ದಾರೆ
ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಕೂರಂಬಳ್ಳಿ ಗ್ರಾಮದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.