ತೊಗರ್ಸಿ ಜಾತ್ರೆಯಲ್ಲಿ ವಕೀಲರಿಗೆ ವಿನಾ ಕಾರಣ ಲಾಠಿಯಲ್ಲಿ ಹಲ್ಲೆ ಮಾಡಿದ ಆರೋಪದ ಅಡಿಯಲ್ಲಿ ಶಿಕಾರಿಪುರ ಸಿಪಿಐ ಗುರುರಾಜ್ ಎನ್ ಮೈಲಾರ್ ರವರನ್ನ ಅಮಾನತುಗೊಳಿಸಿ ಆದೇಶಿಸಲಾಗಿದೆ. ದಾವಣಗೆರೆಯ ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಕೆ.ತ್ಯಾಗರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ.
ಮಾ.13 ರಂದು ತೊಗರ್ಸಿ ಜಾತ್ರೆಯಲ್ಲಿ ದೇವರ ದರ್ಶನಕ್ಕೆ ಬಂದ ಹಿರೇಕೆರೂರು ಹಂಸಭಾವಿ ಗ್ರಾಮದ ವಕೀಲ ಜಯದೇವ್ ಕೆರೂರು ಇವರ ಮೇಲೆ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಲಾಠಿಯಿಂದ ಹಲ್ಲೆ ನಡೆಸಿರುತ್ತಾರೆ. ದರ್ಶನಕ್ಕೆ ಸಾಲಾಗಿ ಬರುವವರನ್ನು ಬೇಗ ಒಳಗೆ ಬಿಡಿ ಎಂದಿದ್ದಕ್ಕೆ ಆಕ್ರೋಶಗೊಂಡ ಶಿಕಾರಿಪುರ ಸಿಪಿಐ ಹಲ್ಲೆ ನಡೆಸಿದ್ದರು.
ಘಟನೆಯ ವೀಡಿಯೋ ವೈರಲ್ ಆದ ನಂತರ ಪೊಲೀಸರು ವಕೀಲ ಜಯದೇವ್ ರವರ ಮೇಲೆಯೇ ಮಹಿಳಾ ಪೊಲೀಸರೊಂದಿಗೆ ಅನುಚಿತ ವರ್ತನೆ ನಡೆಸಿದ ಆರೋಪದ ಅಡಿ ಬಂಧಿಸಲಾಗಿತ್ತು.
ಆದರೆ ಈ ಬಗ್ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಟಿವಿ ಕ್ಯಾಮೆರಾಗಳನ್ನ ತಪಾಸಣೆ ನಡೆಸಿದ್ದರು.
ಸಿಪಿಐ ಗುರುರಾಜ್ ಮೈಲಾರ್ ವಿರುದ್ಧ ಈ ಎಲ್ಲಾ ಸಾಕ್ಷಿಗಳು ಇದ್ದಿದ್ದರಿಂದ ಪೊಲೀಸ್ ಮಹಾನಿರ್ದೇಶಕ ಈ ಎಲ್ಲಾ ವಿಷಯವನ್ನ ಕೂಲಂಕುಷವಾಗಿ ಪರಿಶೀಲಸಿ ಸಿಪಿಐರನ್ನ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ತೊಗರ್ಸಿ ಜಾತ್ರೆಯಲ್ಲಿ ನಡೆದ ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇