ಶಿವಮೊಗ್ಗ: ದೇಶದ ಆಸ್ತಿಯನ್ನು ಮಾರಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ರೈಲು ತಡೆಗೆ ಯತ್ನ :
ಶಿವಮೊಗ್ಗ : ರಾಷ್ಟ್ರೀಯ ಹಣಗಳಿಕೆ ನೀತಿ (NMP) ಯೋಜನೆಯಡಿ ದೇಶದ ಆರು ಲಕ್ಷ ಕೋಟಿ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದ ರೈಲ್ವೆ ನಿಲ್ದಾಣ ದಲ್ಲಿ ರೈಲ್ವೆ ತಡೆ ಯತ್ನಿಸಿದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ದೇಶದಲ್ಲಿ ಅಚ್ಚೆ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿಯಲ್ಲಿ…