ಬೇಳೂರು ಗೋಪಾಲಕೃಷ್ಣ ಬಿಜೆಪಿ ಸರ್ಕಾರ ಪತನದ ಬಗ್ಗೆ ಹಗಲುಕನಸು ಕಾಣುತ್ತಿದ್ದಾರೆ : ಸಚಿವ ಶಿವರಾಂ ಹೆಬ್ಬಾರ್
ಶಿರಸಿ : ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರ ಬೀಳುವ ಕುರಿತು ಸ್ವಪ್ನ ಬಿದ್ದಿರಬೇಕು. ಆದರೆ ಯಾವುದೇ ಕಾರಣಕ್ಕೂ ಒಂದು ದಿನ ಮುಂಚಿತವಾಗಿಯೂ ಸರ್ಕಾರ ಪತನವಾಗಲ್ಲ.ಬಿಜೆಪಿ ಸರ್ಕಾರ ಅವಧಿ ಪೂರೈಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪಾಲಕೃಷ್ಣ ಅವರಿಗೆ ಅಧಿಕಾರ ಇಲ್ಲದೇ ಇರುವುದರಿಂದ ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಆದ ಕಾರಣ ಹತಾಶರಾಗಿ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಅವರ ಸರ್ಕಾರ ಪತನ ಹೇಳಿಕೆಗೆ ತಿರುಗೇಟು ನೀಡಿದರು….