w
Headlines
Home » ಅರಸಾಳಿನ ಕಾಂಗ್ರೆಸ್ ಸದಸ್ಯೆ ಬೆಳಿಗ್ಗೆ ಕಮಲ ಹಿಡಿದು ಸಂಜೆ ವೇಳೆಗೆ ಮತ್ತೆ ವಾಪಾಸ್ ಕೈ ಹಿಡಿದ ರೋಚಕ ಘಟನೆ

ಅರಸಾಳಿನ ಕಾಂಗ್ರೆಸ್ ಸದಸ್ಯೆ ಬೆಳಿಗ್ಗೆ ಕಮಲ ಹಿಡಿದು ಸಂಜೆ ವೇಳೆಗೆ ಮತ್ತೆ ವಾಪಾಸ್ ಕೈ ಹಿಡಿದ ರೋಚಕ ಘಟನೆ

ರಿಪ್ಪನ್ ಪೇಟೆ : ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದ ಅರಸಾಳು ಗ್ರಾಪಂ ಸದಸ್ಯೆ ಪೂರ್ಣಿಮಾ ಸಂಜೆಯಾಗುವಷ್ಟರಲ್ಲಿ ಮತ್ತೆ ಮರಳಿ ಕಾಂಗ್ರೆಸ್ ಗೆ ಸೇರಿದ್ದಾರೆ.

ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆಯನ್ನು ಸೆಳೆದಿದ್ದ ಬಿಜೆಪಿಗೆ ರಿವರ್ಸ್‌ ಆಪರೇಶನ್ ಮಾಡುವ ಮೂಲಕ ಬೇಳೂರು ಗೋಪಾಲಕೃಷ್ಣ ಖಡಕ್ ಉತ್ತರ ನೀಡಿದ್ದಾರೆ.
ಇಂದು ಬೆಳಿಗ್ಗೆ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿ ಡಿ ಎಸ್ ಅರುಣ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅರಸಾಳು ಗ್ರಾಮ ಪಂಚಾಯತ್ ಸದಸ್ಯೆ ಪೂರ್ಣಿಮಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಆದರೆ ಸಂಜೆಯ ಹೊತ್ತಿಗೆ ಗ್ರಾಪಂ ಸದಸ್ಯೆ ಪೂರ್ಣಿಮಾ ಮತ್ತೆ ಕಾಂಗ್ರೆಸ್ ಗೆ ಮರಳಿದ್ದಾರೆ.ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯೆ ಪೂರ್ಣಿಮಾ ನನಗೆ ರಾಜಕೀಯದ ತಿಳುವಳಿಕೆ ಅಷ್ಟಾಗಿ ತಿಳಿದಿಲ್ಲ.ನನ್ನನ್ನು ಹೀಗೊಂದು ಗ್ರಾಮ ಪಂಚಾಯತ್ ಸದಸ್ಯರ ಕಾರ್ಯಕ್ರಮವಿದೆ ಎಂದು ಕರೆದುಕೊಂಡು ಬಂದು ಸಚಿವರ ಬಳಿ ಶಾಲು ಹಾಕಿಸಿದರು.ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ನನಗೆ ನಂತರವೇ ತಿಳಿದಿದ್ದು  ,ನಾನು ಅರಸಾಳು ಗ್ರಾಪಂ ಅಧ್ಯಕ್ಷರಾದ ಉಮಾಕರ್ ರವರ ಬೆಂಬಲದಿಂದ ಗೆದ್ದು ಬಂದಿದ್ದೇನೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಬಿಜೆಪಿಯವರು ಅಮಾಯಕ ಸದಸ್ಯರನ್ನು ಈ ರೀತಿಯಾಗಿ ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದು.ನೈತಿಕತೆಯಿಂದ ಚುನಾವಣೆ ಎದುರಿಸಿ ಗೆಲ್ಲಲಿ, ಬಿಜೆಪಿಯವರಿಗೆ ಈಗಲೇ ಸೋಲಿನ ಭಯ ಶುರುವಾಗಿದೆ ಹಾಗಾಗಿ ಹತಾಶರಾಗಿ ಈ ರೀತಿಯಾದ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಎಂದರು.

ಅರಸಾಳು ಗ್ರಾಪಂ ಅಧ್ಯಕ್ಷರಾದ ಉಮಾಕರ್ ಮಾತನಾಡಿ ಸ್ಥಳೀಯ ಬಿಜೆಪಿ ಮುಖಂಡರುಗಳು ಜಿಲ್ಲಾ ಮಟದ ನಾಯಕರನ್ನು ಹಾಗೂ ಸಚಿವರನ್ನು ಮೆಚ್ಚಿಸಲು ಈ ರೀತಿಯಾಗಿ ಅಮಾಯಕ ಸದಸ್ಯರನ್ನು ಬಲಿ ಕೊಡಬಾರದು.ರಾಜಕೀಯ ದಾಳಕ್ಕೆ ಮುಗ್ದ ಅಮಾಯಕ ಸದಸ್ಯರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷ ಸಾಬ್,ರಿಪ್ಪನ್ ಪೇಟೆ ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್,ಶ್ರೀಮಂತ್ ದೂನಾ , ಧನಲಕ್ಷ್ಮಿ,ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗೆರೆ.ಸಾಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಲೂರ್,ಹೆದ್ದಾರಿಪುರ ಗ್ರಾಪಂ ಸದಸ್ಯ ಪ್ರವೀಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

(ಇಂದು ಬೆಳಿಗ್ಗೆ ಕಮಲ ಮು(ಹಿ)ಡಿದಿದ್ದ ಪೂರ್ಣಿಮ !!!!!!!!)

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.