ರಿಪ್ಪನ್ ಪೇಟೆ : ಶಿವಮೊಗ್ಗ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಡಿ ಎಸ್ ಅರುಣ್ ಗೆಲುವು ನಿಶ್ಚಿತವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳೇ ಡಿ ಎಸ್ ಅರುಣ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ತಿಳಿಸಿದ್ದಾರೆ.
ಅವರು ಪೋಸ್ಟ್ ಮ್ಯಾನ್ ನ್ಯೂಸ್ ತಂಡದೊಂದಿಗೆ ಮಾತನಾಡಿ ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಯಡಿಯೂರಪ್ಪ ಕನಿಷ್ಠ 20 ಕ್ಷೇತ್ರದಲ್ಲಿ ಗೆಲವು ಸಾಧಿಸಲು ಪಣತೊಟ್ಟಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 4166 ಮತದಾರರಿದ್ದು ಶೇ. 93.5 ರಷ್ಟು ಗ್ರಾಪಂ ಸದಸ್ಯರಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿಯೂ ಕಾರ್ಯ ಪ್ರಮುಖ್ ನೇಮಿಸಲಾಗಿದೆ. ಎಂಎಲ್ಸಿ, ಎಂಪಿ, ಗ್ರಾಪಂ ಸದಸ್ಯರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಈ ಅಡಿಪಾಯ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಲುವುಗಳಿಂದ ಉತ್ತಮ ಸ್ಥಿತಿಯಲ್ಲಿದೆ. ಪಂಚಾಯತ್ ವ್ಯವಸ್ಥೆ ಪರಿಪೂರ್ಣ ಪಕ್ವತೆ ಪಡೆಯಬೇಕಾದರೆ ಸಮಾಜದ ಎಲ್ಲಾ ವರ್ಗಗಳಿಗೆ ಸಂವಿಧಾನದತ್ತವಾಗಿ ಅಧಿಕಾರ ಲಭ್ಯವಾಗಬೇಕಾಗಿದೆ. ಈ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕೆಂದರು.
ಮತದಾನಕ್ಕೆ 2 ದಿನ ಬಾಕಿ ಉಳಿದಿದೆ.ರಿಪ್ಪನ್ ಪೇಟೆ ಶಕ್ತಿ ಕೇಂದ್ರದ ಪ್ರತಿ ಪಂಚಾಯಿತಿ ಸದಸ್ಯರನ್ನ ಸಂಪರ್ಕಿಸಲಾಗಿದೆ.ಎಲ್ಲಾ ಸದಸ್ಯರು ಬಿಜೆಪಿಯನ್ನು ಬೆಂಬಲಿಸುವ ಭರವಸೆ ಇದೆ ಎಂದರು.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿಂದಿ ಆಯುವ ಮಕ್ಕಳಿಗೆ ಭದ್ರ ಕೌಟುಂಬಿಕ ಸ್ಥಾನ ಮತ್ತು ಸಾಮಾಜಿಕ ಮನ್ನಣೆ – ಶಿಕ್ಷಣ ನೀಡಲು ಮಾಧವ ನೆಲೆಯ ಅಭಿವೃದ್ಧಿಗೆ ಡಿ ಎಸ್ ಅರುಣ್ ರವರ ಶ್ರಮ ಅನನ್ಯವಾಗಿದೆ ಎಂದರು.
ಈ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು ಚುನಾಯಿತ ಪ್ರತಿನಿಧಿಗಳು ತಮ್ಮ ಅಮೂಲ್ಯ ಮತವನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ನೀಡುವಂತೆ ವಿನಂತಿಸಿದರು.