ಹೊಸ ಟ್ರಾಕ್ಟರ್ ನಲ್ಲಿ ಹೋಗುವಾಗ ವಿಧಿಯಾಟಕ್ಕೆ ಬಲಿಯಾಗಿ
ಹೊಸಕೊಪ್ಪ ಗ್ರಾಮದ ಬಳಿ ಟ್ಯಾಕ್ಟರ್ ಪಲ್ಟಿಯಾಗಿ ಗುಂಡಿಗೆ ಬಿದ್ದಿದ್ದು ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಎನ್ ಟಿ ರಸ್ತೆಯಿಂದ ಹೊಸಕೊಪ್ಪದ ಕೆರೆ ಏರಿಗೆ ಬರುವಾಗ ಎದುರುಗಡೆ ಬಂದ ವಾಹನವನ್ನ ತಪ್ಪಿಸಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ.
ಟ್ರ್ಯಾಕ್ಟರ್ ನ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ್(30) ಎಂಬುವವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಶಶಿನಾಯ್ಕ್ ನ ಮೈ ಮೇಲೆ ಟ್ರ್ಯಾಕ್ಟರ್ ಉರುಳಿಬಿದ್ದ ಪರಿಣಾಮ ಶಶಿನಾಯ್ಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹೊಸ ಟ್ರಾಕ್ಟರ್ ಖರೀದಿಸಿ ಕೆಲವೇ ದಿನಗಳಲ್ಲಿ ಈ ದುರ್ಘಟನೆ ನಡೆದಿದೆ.