w
Headlines
Home » ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕನೆಕ್ಷನ್ ಇಲ್ಲದೇ ನೇತಾಡುತ್ತಿರುವ ಸಿಸಿ ಕ್ಯಾಮೆರಾಗಳು : ಕಾಟಾಚಾರಕ್ಕೆ ಹಾಕಿದ್ದೀರಾ ಅಧಿಕಾರಿಗಳೇ ????

ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕನೆಕ್ಷನ್ ಇಲ್ಲದೇ ನೇತಾಡುತ್ತಿರುವ ಸಿಸಿ ಕ್ಯಾಮೆರಾಗಳು : ಕಾಟಾಚಾರಕ್ಕೆ ಹಾಕಿದ್ದೀರಾ ಅಧಿಕಾರಿಗಳೇ ????

ರಿಪ್ಪನ್ ಪೇಟೆ: ನಾಲ್ಕೂ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಿಪ್ಪನ್ ಪೇಟೆ ವಿನಾಯಕ ವೃತ್ತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಸಿಸಿ ಕ್ಯಾಮೆರಾಗಳು ಕನೆಕ್ಷನ್ ಇಲ್ಲದೇ ಕ್ಯಾಮೆರಾಗಳು ವೈರ್ ಗಳ ಜೊತೆ ನೇತಾಡುತ್ತಿವೆ.

ಇದನ್ನು ನೋಡಿದರೆ “ನೇತಾಡುತ್ತಿರುವೆವೋ ನಾವು ಜೋತಾಡುತ್ತಿರುವೆವು” ಎಂದು ಯುಗಳ ಗೀತೆ ಹಾಡುತ್ತಿರುವಂತೆ ಭಾಸವಾಗುತ್ತದೆ !!!
ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯು ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವಂತಹ ಪಟ್ಟಣವಾಗಿದೆ.ಇಲ್ಲಿನ ವಿನಾಯಕ ವೃತ್ತ ದಲ್ಲಿ ಅಧಿಕಾರಿಗಳು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಆದರೆ ಅದೀಗ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಕನೆಕ್ಷನ್ ಇಲ್ಲದೆ ವೈರ್ ಗಳು ಹಾಗೂ ಕ್ಯಾಮೆರಾಗಳು ನೇತಾಡುತ್ತಿವೆ.  

ರಿಪ್ಪನ್ ಪೇಟೆಯಲ್ಲಿ ಹಲವಾರು ತಿಂಗಳುಗಳಿಂದ ಅನೇಕ ಅಪರಾಧ ಪ್ರಕರಣಗಳು ನಡೆದರು ಸಹ ಸಿಸಿ ಕ್ಯಾಮೆರಾ ಸರಿ ಇಲ್ಲದೇ ಇರುವುದರಿಂದ ಅನೇಕ ಪ್ರಕರಣಗಳು ಮುಚ್ವಿಹೋಗಿವೆ.ಇಲ್ಲಿನ ಸಿಸಿ ಕ್ಯಾಮೆರಾದ ಈ ದುಸ್ಥಿತಿಯಿಂದ ಹಲವಾರು ಪ್ರಕರಣಗಳಲ್ಲಿ ಬೇಕಾದ ವೀಡಿಯೋ ತುಣುಕುಗಳಿಗಾಗಿ ಖಾಸಗಿ ವ್ಯಕ್ತಿಗಳ ಮೊರೆ ಹೋಗುತ್ತಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಮೊದಲು ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಗೋ ಸಾಗಾಣಿಕೆ ಹಾಗೂ ಅಪಘಾತ ದೃಶ್ಯಗಳು ಈ ಸಿಸಿ ಕ್ಯಾಮೆರದಲ್ಲಿ ಬಹಳ ಚೆನ್ನಾಗಿ ಸೆರೆಯಾಗುತ್ತಿತ್ತು.ಆದರೆ ಕಳೆದ ಹಲವು ದಿನಗಳಿಂದ ಈ ಸಿಸಿ ಕ್ಯಾಮೆರಾ ಕನೆಕ್ಷನ್ ಇಲ್ಲದೆ ಹಾಳಾಗಿದ್ದು ಅವಶ್ಯಕತೆಗೆ ಬೇಕಾದ ವೀಡಿಯೋ ತುಣುಕನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಇನ್ನಾದರೂ ಕೂಡ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಿಸಿ ಕ್ಯಾಮೆರಾ ಸರಿ ಮಾಡಲಿ ಎಂಬುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಆಶಯ.

ಗಮನ ಹರಿಸ ಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.ಗಂಭೀರ ಸಮಸ್ಯೆ ಉಧ್ಬವಿಸಿದಲ್ಲಿ ಕಾರಣರಾರು ? ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.ಇನ್ನಾದರೂ ಎಚ್ಚೆತ್ತುಕೊಳ್ಳುವವರೆ ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.