ಸಕ್ರೆಬೈಲಿನಲ್ಲಿ ಮರಿ ಆನೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲು ಕಾರಣವೇನು ? ಕಳೆದ ಬಾರಿ ಪುನೀತ್ ಆ ಮರಿ ಆನೆಯನ್ನು ಮುದ್ದಾಡಿದ್ದೇಕೆ? ಶರಾವತಿ ಇನ್ನುಮುಂದೆ ಪುನೀತ್ ರಾಜ್ ಕುಮಾರ್ !!!
ಶಿವಮೊಗ್ಗ : ಸಕ್ರೆಬೈಲು ಬಿಡಾರದ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿದೆ. ಇವತ್ತು ವೀನಿಂಗ್ ಪ್ರಕ್ರಿಯೆ ವೇಳೆ ಮರಿ ಆನೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಕ್ರೆಬೈಲು ಬಿಡಾರದ ನೇತ್ರಾವತಿ ಅನೆಯ ಮರಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗಿದೆ. ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜಕುಮಾರ್ ಅವರು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ನೇತ್ರಾವತಿಯ ಮರಿ ಜೊತೆಗೆ ನಟ ಪುನೀತ್ ಕೆಲವು…