Headlines

ರಿಪ್ಪನ್ ಪೇಟೆಯಲ್ಲಿ ನಡದಿದ್ದೇ 2 ವರ್ಷಗಳ ನಂತರ ಗ್ರಾಮಸಭೆ ಆದರೂ ಹಿರಿಯ ಪತ್ರಕರ್ತ ಧರಣಿ ನಡೆಸಿದ್ದೇಕೆ ? ಹಲವು ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತೇ ರಿಪ್ಪನ್ ಪೇಟೆಯ ಗ್ರಾಮಸಭೆ!!

ರಿಪ್ಪನ್ ಪೇಟೆ: ಬರೊಬ್ಬರಿ ಎರಡು ವರ್ಷಗಳ ನಂತರ  ರಿಪ್ಪನ್ ಪೇಟೆಯ ಕುವೆಂಪು ಸಭಾಂಗಣದಲ್ಲಿ  ಗ್ರಾಮಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆ ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.

ಹೌದು,ಎರಡು ವರ್ಷಗಳ ನಂತರ ನಡೆಯುತ್ತಿದ್ದ ಗ್ರಾಮ ಸಭೆಯಲ್ಲಿ ರಿಪ್ಪನ್ ಪೇಟೆ  ಗ್ರಾಮ ಪಂಚಾಯತಿಯ ಆಡಳಿತ ಕಾರ್ಯ ವೈಖರಿ ಖಂಡಿಸಿ ಹಿರಿಯ ಪತ್ರಕರ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಸಭೆಯಲ್ಲಿ ಏಕಾಂಗಿ ಧರಣಿ ನಡೆಸಿದ ಪ್ರಸಂಗವು ನಡೆಯಿತು.

ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಬರೀಶ್ ನಗರದಲ್ಲಿ ಒಂದೇ ಕುಟುಂಬದ ಇಬ್ಬರ ನಡುವೆ ಇದ್ದ ಖಾತೆಗೆ ಸಂಭಂದಿಸಿದ ವ್ಯಾಜ್ಯವನ್ನು ಬಗೆ ಹರಿಸಿಕೊಡುವಂತೆ ಸದರಿ ಕುಟುಂಬದ ಒಬ್ಬ ಸದಸ್ಯ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಗೆ ಮನವಿ ಸಲ್ಲಿಸಿದರು.

ಅದೇ ಕುಟುಂಬದ ಇನ್ನೊಬ್ಬ ಸದಸ್ಯನ  ಹಣದ,ಅಧಿಕಾರದ ಪ್ರಭಾವಕ್ಕೆ ಮಣಿದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಆಡಳಿತವು ಆ  ವ್ಯಕ್ತಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿರುತ್ತದೆ.ಹಾಗೇಯೆ ಪ್ರಮುಖ್ ಎಂಬುವರ ಅರ್ಜಿಯ ಬಗ್ಗೆ ಸಮರ್ಪಕ ಉತ್ತರ ನೀಡದ ಗ್ರಾಮ ಪಂಚಾಯಿತಿ ಆಡಳಿತ ವರ್ಗದ ವರ್ತನೆ ಖಂಡಿಸಿ ನ್ಯಾಯ ಕೊಡಿಸುವಂತೆ ಕೋರಿ ಈ ಅಮಾನುಷ ಕ್ರತ್ಯವನ್ನು ಖಂಡಿಸಿ ತ ಮ ನರಸಿಂಹ  ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ದಿಡೀರ್ ಧರಣಿ ಕುಳಿತು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಸಮಸ್ಯೆ ಬಗೆಹರಿಸುವ ಕುರಿತು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ತ ಮ ನರಸಿಂಹ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.





Leave a Reply

Your email address will not be published. Required fields are marked *