ಮಲೆನಾಡಿನಲ್ಲಿ ಮನೆ ಮುರಿದರೇ ಪೊಲೀಸರು ?? ಪೊಲೀಸರ ಗೂಂಡಾ ವರ್ತನೆಯ ಆರೋಪಕ್ಕೆ ಕಡೂರು ಪಿಎಸ್ಸೈ ರಮ್ಯಾ ಹೇಳಿದ್ದೇನು !!
ಮಲೆನಾಡಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಗೂಂಡಾ ವರ್ತನೆ ತೊರಿದ್ದು. ಮನೆಯ ಬಾಗಿಲು, ಹಂಚು ಮುರಿದು ರೌಡಿಗಳಂತೆ ಪೊಲೀಸರು ಮನೆಯ ಒಳ ಭಾಗವನ್ನು ಪ್ರವೇಶಿಸಿದ್ದಾರೆ ಎಂದು ಕುಟುಂಬದ ಸದಸ್ಯರಿಂದ ಪೋಲಿಸರ ಮೇಲೆ ಆರೋಪ ಕೇಳಿಬಂದಿದೆ. ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಬಾರ್ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದರು. ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಖಾಕಿ ಪಡೆ ಎಳೆದೊಯ್ದಿದ್ದಾರೆ ಎಂದು ಕುಟುಂಬದ ಓರ್ವ ಸದಸ್ಯರು ಆರೋಪಿಸಿದ್ದಾರೆ.ಒಂದೇ ಮನೆಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ….