ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಇರುವ ದೊಡ್ಡ ಗುಂಡಿಯನ್ನು ಕೂಡಲೇ ಮುಚ್ಚುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರಸ್ತೆ ಮಧ್ಯದಲ್ಲಿಯೇ ಕುರ್ಚಿ ಹಾಕಿ ವಿನೂತನ ರೀತಿಯಾಗಿ ಪ್ರತಿಭಟಿಸಿದ್ದಾರೆ.
ರಾಜಧಾನಿ ಹಾಗೂ ಕರಾವಳಿಗೆ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ವೃತ್ತ ಇದಾಗಿದ್ದು ಹಲವು ದಿನಗಳಿಂದ ರಸ್ತೆ ಹದಗೆಟ್ಟಿ,ದೊಡ್ಡ ಗುಂಡಿ ಬಿದ್ದಿದ್ದರು ಯಾವ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಸಾಮಾಜಿಕ ಹೋರಾಟಗಾರರಾದ ಟಿ ಆರ್ ಕೃಷ್ಣಪ್ಪ ಇಂದು ಗುಂಡಿ ಬಿದ್ದ ಜಾಗದಲ್ಲಿಯೇ ಕುರ್ಚಿ ಹಾಕಿ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ನಂತರ ಮಾತನಾಡಿದ ಅವರು ಭಾರತದಲ್ಲಿ ಸ್ವಚ್ಚ ಭಾರತ್ ಅಭಿಯಾನಕ್ಕಿಂತ ಹೆಚ್ಚಾಗಿ “ರಸ್ತೆಯ ಗುಂಡಿ ಮುಚ್ಚೋ ಭಾರತ್” ಅಭಿಯಾನ ನಡೆಸುವ ಅಗತ್ಯತೆ ಹೆಚ್ಚಿದೆ,ಚಿನ್ನದ ರಸ್ತೆಯ ಭರವಸೆ ಕೊಟ್ಟವರು ಕೊನೆ ಪಕ್ಷ ಗುಂಡಿ ಮುಚ್ಚುವ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ಬೇಸರದ ಸಂಗತಿ.
ವಿನಾಯಕ ವೃತ್ತದಲ್ಲಿ ಇರುವ ಗುಂಡಿಯಲ್ಲಿ ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆ ಇದೆ, ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು,ಇದೇ ರಸ್ತೆಯಲ್ಲಿ ರಾಜ್ಯದ ಗೃಹ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು,ಕ್ಷೇತ್ರದ ಶಾಸಕರು,ಗ್ರಾಪಂ ಪಿಡಿಓ ದಿನ ನಿತ್ಯ ಒಡಾಡುತಿದ್ದರು ಈ ಗುಂಡಿಯ ಮುಚ್ಚಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಇನ್ನೊಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಗುಂಡಿ ಬಿದ್ದ ಸ್ಥಳದಲ್ಲಿಯೇ ಕುಳಿತು ಸತ್ಯಾಗ್ರಹ ನಡೆಸುತ್ತೇನೆ ಎಂದು ಈ ಸಂಧರ್ಭದಲ್ಲಿ ಎಚ್ಚರಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರವರಿಗೆ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಬೆಂಬಲ ಸೂಚಿಸಿ ಪ್ರಶಂಸಿದ್ದಾರೆ.