ಸಾಗರ : ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಚರಣೆ , 150 ಲೀ ಬೆಲ್ಲದ ಕೊಳೆ ವಶ
ಸಾಗರ : ಅಕ್ರಮವಾಗಿ ಕಳ್ಳ ಭಟ್ಟಿ ಸಾರಾಯಿ ತಯಾರಿಕೆಗೆ ಬಳಸುವ ಬೆಲ್ಲ ಕೊಳೆಯನ್ನು ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಸಾಗರ ತಾಲೂಕಿನ ಸುಳ್ಳೂರು ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹೊಲದಲ್ಲಿ ಸಂಗ್ರಹಿಸಿದ್ದ 150 ಲೀಟರ್ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳ್ಳೂರು ಗ್ರಾಮದ ಕಾಳಿ ಕಟ್ಟೆ ಎಂಬಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಸಂಗ್ರಹಿಸಿದ್ದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಲಕ್ಷಣ ಬಿನ್ ಬಸಪ್ಪ…