ಶಿವಮೊಗ್ಗ: ಸೊರಬ ಪುರಸಭೆ ಅಧ್ಯಕ್ಷ ಅಧ್ಯಕ್ಷ ಎಂ.ಡಿ.ಉಮೇಶ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವು ಲಭಿಸಿದೆ. ಪರಿಣಾಮ ಸೊರಬ ಪುರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ ಕೈ ತಪ್ಪಿದೆ.
ಇಂದು ಸೊರಬ ಪುರಸಭೆ ಉಪಾಧ್ಯಕ್ಷೆ ಮಧುರಾ ಜಿ.ಶೇಟ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ನಿರ್ಣಯದ ಪರ 11 ಮತಗಳು ಲಭ್ಯವಾಗಿದೆ. 12 ಜನ ಸದಸ್ಯರಿರುವ ಪುರಸಭೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 4, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ತಲಾ 1 ಸ್ಥಾನ ಲಭಿಸಿದ್ದು, 12 ಜನ ಸದ್ಯರಲ್ಲಿ ಅವಿಶ್ವಾಸ ನಿರ್ಣಯದ ಪರ 11 ಮತ ಬಂದಿದೆ. ಇದರೊಂದಿಗೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ತೀವ್ರ ಮುಖಭಂಗ ಎದುರಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಚರ್ಚೆ ನಡೆಸಿದ್ದರು. ಈ ವೇಳೆ ಅಧ್ಯಕ್ಷರ ವರ್ತನೆ ವಿರುದ್ಧ ಸದಸ್ಯರು ಆಕ್ರೋಶ ಹೊರ ಹಾಕಿದ್ದರು. ಸಭೆಯ ಬಳಿಕವೂ ಅವಿಶ್ವಾಸ ನಿರ್ಣಯ ಮಂಡಿಸಿ ಗೆಲುವು ಪಡೆಯುವಲ್ಲಿ ಸದಸ್ಯರು ಯಶಸ್ವಿಯಾಗಿದ್ದಾರೆ. ಅವಿಶ್ವಾಸ ನಿರ್ಣಯ ಸಂದರ್ಭದ ಸಭೆಗೆ ಗೈರಾದ ಬಿಜೆಪಿಯ ಎಂಎಲ್ಎ, ಎಂಎಲ್ಸಿ ಹಾಗೂ ಎಂಪಿ ಮೂವರು ಗೈರು ಹಾಜರಾಗಿದ್ದರು.