Headlines

ಸಾಗರ ಗ್ರಾಮಾಂತರ ಪೋಲೀಸರ ಭರ್ಜರಿ ಕಾರ್ಯಾಚರಣೆ : ಮನೆಗಳ್ಳತನ ಆರೋಪಿ ಮಾಲು ಸಮೇತ ವಶ





 

ಸಾಗರ : ಪಟ್ಟಣದ ಸಮೀಪದ ಆವಿನಹಳ್ಳಿ ಬಸ್ ನಿಲ್ದಾಣದ ಬಳಿ 30 ವರ್ಷದ ವ್ಯಕ್ತಿಯನ್ನು ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಸಾಗರ ಗ್ರಾಮಾಂತರ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿದ್ದು ಗೊತ್ತಾಗಿದೆ.
ಈ ವೇಳೆ ಆತನಿಂದ ಬಂಗಾರದ ಬಂಗಾರದ ಆಭರಣ,ಬೆಳ್ಳಿ,ನಗದು ಹಣ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.ಆರೋಪಿಯಿಂದ ಒಟ್ಟು 4.71.660 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲಾ.ಎಸ್.ಪಿ ಲಕ್ಷ್ಮಿ ಪ್ರಸಾದ್ ಮತ್ತು ಹೆಚ್ಚುವರಿ ಎಸ್.ಪಿ ಶೇಖರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ಸಾಗರ ಉಪ ವಿಭಾಗದ ಡಿ.ವೈ.ಎಸ್.ಪಿ ವಿನಾಯಕ್ ಶೆಟಗೇರಿ ಸೂಚನೆ ಮೇರೆಗೆ  ವಿಶೇಷ ತಂಡವನ್ನು ರಚಿಸಲಾಗಿತ್ತು.ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಗಿರೀಶ್,ಸಬ್ ಇನ್ಸ್ ಪೆಕ್ಟರ್ ಸುಜಾತ ಸಿಬ್ಬಂದಿಗಳಾದ ಶ್ರೀಧರ್,ಗಿರೀಶ್ ಬಾಬು,ಅಶೋಕ್,ಈರಯ್ಯ,ಪ್ರಕಾಶ್,ಮೇಘರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.



 ವರದಿ: ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *