Headlines

ರಿಪ್ಪನ್ ಪೇಟೆ:ಪಂಡಿತ್ ದೀನದಯಾಳ್ ಉಪಾಧ್ಯಾಯರ 150ನೆ ಜನ್ಮ ದಿನಾಚರಣೆ

ರಿಪ್ಪನ್ ಪೇಟೆ : ಪಂಡಿತ್ ದೀನದಯಾಳ್ ಉಪಾಧ್ಯಾಯರ 150ನೆ ಜನ್ಮ ದಿನಾಚರಣೆಯನ್ನು ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪನಮನ ಮಾಡುವುದರ ಮೂಲಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ರಿಪ್ಪನ್ ಪೇಟೆ ಮತ್ತು ಹುಂಚ ಹೋಬಳಿಯ 42 ಬೂತ್ ಕೇಂದ್ರಗಳಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಎಂದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ತಿಳಿಸಿದರು
ನಂತರ ಮಾತನಾಡಿದ ಜಿಲ್ಲಾ ಬಿಜೆಪಿ ಮುಖಂಡ ಆರ್ ಟಿ ಗೋಪಾಲ್ ಪಂಡಿತ್ ದೀನದಯಾಳ ಉಪಾಧ್ಯಾಯರು ಒಬ್ಬ ಉದಾತ್ತ ಆದರ್ಶವ್ಯಕ್ತಿ ಮತ್ತು ಪ್ರಚಂಡ ಸಂಘಟನಾ ಸಾಮಾರ್ಥ್ಯವನ್ನು ಹೊಂದಿದ್ದವರಾಗಿದ್ದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು. ಅವರು ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ, ರಾಜಕಾರಣಿ, ಬರಹಗಾರ, ಪತ್ರಕರ್ತ, ವಾಗ್ಮಿ, ಸಂಘಟನ ಚತುರರು ಮುಂತಾದ ಹಲವು ಸರ್ವಶ್ರೇಷ್ಠ ಗುಣಗಳ ಆಕರವಾಗಿದ್ದರು ಎಂದರು.

ಗ್ರಾಮ ಪಂಚಾಯತ್ ಸದಸ್ಯ ಸುಧೀಂದ್ರ ಪೂಜಾರಿ ಮಾತನಾಡಿ ಪಂಡೀತ್ ದೀನ್ ದಯಾಳರು ಒಬ್ಬ ಆರ್‌ಎಸ್‌ಎಸ್‌ನ ಆದರ್ಶ ಸ್ವಯಂಸೇವಕನೆಂದೇ ಪರಿಗಣಿಸುತ್ತಾರೆ ಕಾರಣ ಅವರ ನಡೆನುಡಿಗಳು, ಕಾರ್ಯನೀತಿ ಅಪ್ಪಟ ಸಂಘದ ಚಿಂತನೆಗಳ ಪ್ರತಿಫಲನವಾಗಿತ್ತು.ದೀನ್‌ದಯಾಳರು ‘ಏಕಾತ್ಮವಾದ’ದಲ್ಲಿ ಪ್ರಬಲ ನಂಬಿಕೆಯನ್ನಿರಿಸಿದ್ದರು. ಇದು ಇವತ್ತಿನ ಬಿಜೆಪಿಯ ಮಾರ್ಗಸೂಚಿಯೂ ಹೌದು. ಇದು ದೇಹ, ಮನಸ್ಸು, ಮಾನಸಿಕತೆಗಳು ಹೇಗೆ ಆತ್ಮನೊಂದಿಗೆ ಒಂದಾಗಿ ಸಮಾಜದ ಜೊತೆ ಸ್ಪಂದಿಸಿಕೊಳ್ಳುತ್ತದೆ, ಅಗತ್ಯತೆ ಮತ್ತು ಆಧ್ಯಾತ್ಮಿಕತೆಗಳ ಸಂಗಮವನ್ನು ಹೇಗೆ ಸಾಧ್ಯವಾಗಿಸಿಕೊಳ್ಳುವುದು ಎನ್ನುವುದನ್ನು ‘ಏಕಾತ್ಮವಾದ’ವು ತಿಳಿಸುತ್ತದೆ. ಇದು ಈ ಮಣ್ಣಿನ ಚಿಂತನೆಯಾಗಿದ್ದು, ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರು ಜಾಣ್ಮೆ ಮತ್ತು ಪ್ರಯೋಗಿಕ ಮತ್ತು ಸರಳ ವ್ಯಕ್ತಿಯಾಗಿದ್ದರು. ಸ್ವಾವಲಂಬಿ ಭಾರತದ ಕನಸನ್ನು ಕಂಡ ಅವರು, ಹಳ್ಳಿಹಳ್ಳಿಗಳು ಆರ್ಥಿವಾಗಿ ಸದೃಢವಾಗಬೇಕು ಅದಕ್ಕಾಗಿ ವಿಕೇಂದ್ರಿತ ಆಡಳಿತ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕೆಂದು ಹೇಳುತ್ತಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರ್ಜುನ್ ಸ್ವಾಮಿ, ಮುಖಂಡರಾದ ಸುರೇಶ್ ಸಿಂಗ್, ಎನ್ ಸತೀಶ್, ರಾಘವೇಂದ್ರ,ರವಿಶಂಕರ್, ತ ಮ ನರಸಿಂಹ, ರವಿ ಆಚಾರ್, ಹೂವಪ್ಪ, ಅಶ್ವಿನಿ, ನಿರುಪ್ ಕುಮಾರ್, ದೀಪ ಸುಧೀಂದ್ರ, ದಾನಮ್ಮ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *