ಭದ್ರಾವತಿ : ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಿ ಶಾರದ ಅಪ್ಪಾಜಿ ಗೌಡರ ಹೆಸರು ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ

ಭದ್ರಾವತಿ : ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಭದ್ರಾವತಿಯ ಮುಂದಿನವಿಧಾನ ಸಭೆಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪಾಜಿ ಗೌಡರ ಪತ್ನಿ ಶಾರದ ಅಪ್ಪಾಜಿಗೌಡರನ್ನೇ ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಅವರು ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿರುವ ಅಪ್ಪಾಜಿಗೌಡರ ತೋಟದಲ್ಲಿ ಅವರ ಪುಣ್ಯಸ್ಮರಣೆಯ ದಿನದಂದು ಪ್ರತಿಮೆಯನ್ನ ಅನಾವರಣಗೊಳಿಸಿ ಮಾಧ್ಯಮದವರ ಜೊತೆ ಮಾತನಾಡಿದರು.
ಭದ್ರಾವತಿಯ ಅಪ್ಪಾಜಿ ಗೌಡರ ಅಭಿಮಾನಿಗಳು ಯಾರನ್ನು ಅಭ್ಯರ್ಥಿಯನ್ನ ನೇಮಿಸಬೇಕೆಂದು ತೀರ್ಮಾನಿಸಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಗೌಡರ ಕುಟುಂಬದ ಏಳಿಗೆಗೆ ಶ್ರಮವಹಿಸಿರುವ ಶ್ರಮ ವರ್ಗ ಏನಿದೆ ಅವರ ಸಹಮತದೊಂದಿಗೆ ಜೊತೆಯಲ್ಲಿ ಚರ್ಚಿಸಿ ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ಭದ್ರಾವತಿಯ ಜೆಡಿಎಸ್ ಅಭ್ಯರ್ಥಿಯಾಗಿ ಶಾರದ ಅಪ್ಪಾಜಿ ಗೌಡರನ್ನು ಚುನಾವಣೆಗೆ ನಿಲ್ಲಿಸಲು ಪಕ್ಷ ನಿರ್ಧರಿಸಿದೆ.

ಸೆ.27 ರಂದು ಬೆಂಗಳೂರು ಬಿಡದಿಯಲ್ಲಿ ಪಕ್ಷದ ಕಾರ್ಯಗಾರ ಏರ್ಪಡಿಸಲಾಗಿದೆ. 140 ಮುಂದಿನ ವಿಧಾನ ಅಭ್ಯರ್ಥಿಗಳ ಪ್ರಥಮ ಹಂತದ ಕಾರ್ಯಗಾರ ನಡೆಯಲಿದೆ. ಅಲ್ಲಿ ಎಲ್ಲ ವಿಷಯಗಳನ್ನ ಚರ್ಚಿಸಲಾಗುವುದು ಎಂದರು.

ಮಾಧ್ಯಮದವರು ಧಾರ್ಮಿಕ ಕಟ್ಟಡ ತೆರವುಗೊಳಿಸಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕುಮಾರ ಸ್ವಾಮಿ, ಬಿಜೆಪಿ ಪಕ್ಷ ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದೆಡೆ ಅವರ ಸರ್ಕಾರದಲ್ಲಿ ದೇವಸ್ಥಾನ ಒಡೆದು ವಿದೇಯಕ ತರಲು ಹೊರಟಿದ್ದಾರೆ.
ಈ ಮೊದಲೆ ಸರ್ಕಾರ ಎಚ್ಚೆತ್ತುಕೊಂಡಿದ್ದಲ್ಲಿ ಅವರ ನಿಜವಾದ ನಿಲುವಾದ ಹಿಂದುತ್ವ ರಕ್ಷಣೆ ಮಾಡುವ ನಡೆ ಏನಿತ್ತು ಅದನ್ನ ಕಾಪಾಡಿಕೊಂಡು ಹೋಗಬಹುದಿತ್ತು. ಆದರೆ ಈ ವಿಷಯದಲ್ಲಿ  ಬಿಜೆಪಿ ಎಡವಿದೆ. ಇದರಿಂದ ಹೊಸ ಡ್ರಾಮ ಆರಂಭಿಸಿದೆ ಎಂದು ಆರೋಪಿಸಿದರು.

ಭದ್ರಾವತಿಯ ಸಣ್ಣ ಕುಟುಂಬದಲ್ಲಿ ಹುಟ್ಟಿ ಕಾರ್ಮಿಕ ಜೀವನ ನಡೆಸಿದ ಅಪ್ಪಾಜಿ ಗೌಡರ‌ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನ ಅಭಿಮಾನಿಗಳು ನೆರವೇರಿಸುತ್ತಿದ್ದಾರೆ ಅದರಲ್ಲಿ ಭಾಗಿಯಾಗಿದ್ದೇನೆ. ಹಲವಾರು ಮಠಾಧೀಶರ ಸಾನಿಧ್ಯದಲ್ಲಿ, ಹಲವಾರು ರಾಜಕೀಯ ಮುಖಂಡರ ನೇತೃತ್ವದಲ್ಲಿ ಪ್ರತಿಮೆ ಆನಾವರಣಗೊಳಿಸಲಾಗಿದೆ ಎಂದರು.

Leave a Reply

Your email address will not be published. Required fields are marked *