Headlines

RIPPONPETE | ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಬಿಜೂ ಮಾರ್ಕಸ್ ನಿಧನ

RIPPONPET | ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಬಿಜೂ ಮಾರ್ಕಸ್ ನಿಧನ ರಿಪ್ಪನ್‌ಪೇಟೆ : ಪಟ್ಟಣದ ಹೆಮ್ಮೆಯ ವಾಲಿಬಾಲ್ ಆಟಗಾರ ಬಿಜೂ ಮಾರ್ಕೋಸ್ (56) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಾಲುಗುಡ್ಡೆ ನಿವಾಸಿಯಾಗಿದ್ದ ಬಿಜೂ ಮಾರ್ಕಸ್ (56) ಅಲ್ಪ ಕಾಲದ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಹೊಸನಗರ ತಾಲೂಕಿನಾದ್ಯಂತ ಅದೆಷ್ಟೋ ಯುವಕರಿಗೆ ವಾಲಿಬಾಲ್ ಕ್ರೀಡಾಸಕ್ತಿಯನ್ನು ಬೆಳೆಸುವ ಮೂಲಕ…

Read More

ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಗ್ರಾಪಂ ನೌಕರರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಟಿ ಆರ್ ಕೃಷ್ಣಪ್ಪ ಏಕಾಂಗಿ ಪ್ರತಿಭಟನೆ

ರಿಪ್ಪನ್‌ಪೇಟೆ : ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದನ್ನು ವಿರೋಧಿಸಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯ ಮುಂಭಾಗ ಏಕಾಂಗಿಯಾಗಿ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯ ನೌಕರರು ಸಾರ್ವಜನಿಕರಿಗೆ ಕೆಲಸ ಮಾಡಿ ಸೇವೆ ಮಾಡಲು ನೇಮಕಗೊಂಡಿರುತ್ತಾರೆ. ಅವರ ಸ್ವಹಿತಾಸಕ್ತಿಗಾಗಿ ಪ್ರತಿಭಟನೆ ಕುಳಿತರೆ ಸಾರ್ವಜನಿಕರು ನಿತ್ಯ ಕಛೇರಿಗೆ ಅಲೆಯಬೇಕಾಗಿದೆ. ನೌಕರರಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರ…

Read More

ರೌಡಿಶೀಟರ್ ಅಮ್ಮು ಕಾಲಿಗೆ ಪೊಲೀಸರ ಗುಂಡೇಟು

ರೌಡಿಶೀಟರ್ ಅಮ್ಮು ಕಾಲಿಗೆ ಪೊಲೀಸರ ಗುಂಡೇಟು ಶಿವಮೊಗ್ಗ : ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಾಳು ರೌಡಿ ಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮುನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್‌ನಲ್ಲಿ ಇಂದು ಬೆಳಗ್ಗೆ ಹಬೀಬುಲ್ಲಾನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಜಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್…

Read More

ಮೆಗ್ಗಾನ್ ಆಸ್ಪತ್ರೆಯಲ್ಲಿ ಉಪ್ಪಿನ ಕೊರತೆ.! – ವಿಷ ಸೇವಿಸಿದ್ದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವು | ಕುಟುಂಬಸ್ಥರ ಆಕ್ರೋಶ

ಮೆಗ್ಗಾನ್ ಆಸ್ಪತ್ರೆಯಲ್ಲಿ ಉಪ್ಪಿನ ಕೊರತೆ – ವಿಷ ಸೇವಿಸಿದ್ದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವು | ಕುಟುಂಬಸ್ಥರ ಆಕ್ರೋಶ ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಉಪ್ಪಿನ ಕೊರತೆಯಿಂದ ವಿಷ ಸೇವಿಸಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸ್ವಾಮಿನಾಥ್ (55) ಎಂಬಾತನನ್ನು ಭದ್ರಾವತಿಯಿಂದ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ವಿಫಲರಾಗಿದ್ದು…

Read More

ಜಿಲ್ಲಾ ಯುವ ಸಂಸತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸ್ಪೂರ್ತಿ

ಜಿಲ್ಲಾ ಯುವ ಸಂಸತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸ್ಪೂರ್ತಿ ಶಿವಮೊಗ್ಗ ಮಹಾನಗರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಸ್ಪೂರ್ತಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಸಗಲ್ಲಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೆ.ಎನ್. ಸ್ಫೂರ್ತಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಕು|| ಸ್ಫೂರ್ತಿ ನಾಗರಾಜ ಮತ್ತು ನಾಗರತ್ನ ದಂಪತಿಗಳ…

Read More

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್.

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್ ಹೊಸನಗರ: ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಈ ನಿಟ್ಟಿನಲ್ಲಿ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ ಸಾಲ್ವಿಸ್ ಅವರು ಸ್ಮರಣಾರ್ಥ ಈ ಒಂದು ವಾಲಿಬಾಲ್ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಸುಧಾಕರ್ ತಿಳಿಸಿದರು. ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ…

Read More

ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರಲಿಲ್ಲ – ಗ್ರಾಪಂ ಅಧ್ಯಕ್ಷ ಸಚಿನ್ ಗೌಡ

ರಿಪ್ಪನ್‌ಪೇಟೆ : ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಎಂದು ಅಮೃತ ಗ್ರಾಪಂ ನೂತನ ಅಧ್ಯಕ್ಷ ಸಚಿನ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದಲ್ಲಿ ಇಂದು ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಅಮೃತ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸಿದಾಗ ಅವರು ಮನ್ನಣೆ ನೀಡದ ಕಾರಣ ಬಿಜೆಪಿ ಪಕ್ಷದ ಬಂಡಾಯವಾಗಿ ಸ್ಪರ್ಧಿಸಿದ್ದೆ ಆದರೆ ಕೆಲವು ಮಾದ್ಯಮಗಳಲ್ಲಿ ಕಾಂಗ್ರೆಸ್…

Read More

ಶಾಂತಿ ಸೌಹಾರ್ಧತೆಯಿಂದ ಐಕ್ಯತೆ ಸಾಧ್ಯ – ಸೊನಲೆ ಶ್ರೀನಿವಾಸ್

ರಿಪ್ಪನ್‌ಪೇಟೆ : ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಇತಿಹಾಸಕಾರ ಸೊನಲೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಆವರಣದ ಕೂರ ತಂಝಲ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸಿದ್ದ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ…

Read More

ಕೆ ಎಸ್ ಈಶ್ವರಪ್ಪ ಬಿಜೆಪಿ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವುದು ಸಲ್ಲ – ಹರತಾಳು ಹಾಲಪ್ಪ

ಕೆ ಎಸ್ ಈಶ್ವರಪ್ಪ ಬಿಜೆಪಿ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವುದು ಸಲ್ಲ – ಹರತಾಳು ಹಾಲಪ್ಪ ರಿಪ್ಪನ್‌ಪೇಟೆ : ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ರವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆ ಎಸ್ ಈಶ್ವರಪ್ಪ ಈಗಾಗಲೇ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ ಅವರು ನಮ್ಮ…

Read More

ಗರ್ತಿಕೆರೆ ಗ್ರಾಪಂ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆ

ಗರ್ತಿಕೆರೆ ಗ್ರಾಪಂ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆಯಾಗಿದ್ದಾರೆ. ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗಂಧ್ರಳ್ಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಚಿನ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ಜನ ಸದಸ್ಯ ಬಲದ ಗ್ರಾಪಂ ಚುನಾವಣೆಯಲ್ಲಿ ಸಚಿನ್ ಗೌಡ 7 ಮತ ಪಡೆದರೆ ಪ್ರತಿಸ್ಪರ್ಧಿ ದೇವರಾಜ್ 4 ಮತ ಪಡೆದಿದ್ದಾರೆ. ಬಿಜೆಪಿ ಬೆಂಬಲಿತ 8 ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ…

Read More