Headlines

ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಗ್ರಾಪಂ ನೌಕರರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಟಿ ಆರ್ ಕೃಷ್ಣಪ್ಪ ಏಕಾಂಗಿ ಪ್ರತಿಭಟನೆ

ರಿಪ್ಪನ್‌ಪೇಟೆ : ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದನ್ನು ವಿರೋಧಿಸಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯ ಮುಂಭಾಗ ಏಕಾಂಗಿಯಾಗಿ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯ ನೌಕರರು ಸಾರ್ವಜನಿಕರಿಗೆ ಕೆಲಸ ಮಾಡಿ ಸೇವೆ ಮಾಡಲು ನೇಮಕಗೊಂಡಿರುತ್ತಾರೆ. ಅವರ ಸ್ವಹಿತಾಸಕ್ತಿಗಾಗಿ ಪ್ರತಿಭಟನೆ ಕುಳಿತರೆ ಸಾರ್ವಜನಿಕರು ನಿತ್ಯ ಕಛೇರಿಗೆ ಅಲೆಯಬೇಕಾಗಿದೆ. ನೌಕರರಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಕೆಲಸವನ್ನು ಮರೆತು ತಮಗೆ ಬೇಕಾದಂತೆ ಆಡಳಿತ ನಡೆಸಬಹುದೆಂಬ ಭಾವನೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇಂತಹ ನೀಚರನ್ನು ವಜಾಗೊಳಿಸಿ ನಿಷ್ಟಾವಂತರಿಗೆ ಕೆಲಸ ಮಾಡಲು ಅವಕಾಶಕ್ಕೆ ಪ್ರೇರಣೆಯಾಗಲಿ ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *