ಡ್ರೋಣ್ ಬಳಸಿ ನ್ಯಾನೊ ಯೂರಿಯ ಸಿಂಪಡಣೆ : ರೈತರಿಗೆ ಉಚಿತ ಪ್ರಾತ್ಯಕ್ಷಿಕೆ
ಹೊಸನಗರ: ಡ್ರೋಣ್ ಮೂಲಕ ನ್ಯಾನೋ ಯೂರಿಯ ಸಿಂಪಡಣೆ ಕುರಿತು ರೈತರಿಗೆ ಉಚಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ತಾಲೂಕಿನ ಕೆರೆಹಳ್ಳಿ ಹೋಬಳಿ ಬಾಳೂರು ಗ್ರಾಮದ ರೈತ ಧನಂಜಯ ಮತ್ತು ಮಂಜಪ್ಪ ಅವರ ಭತ್ತದ ಕೃಷಿ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆ ಆಯೋಜಿಸಿದ್ದ ಈ ಪ್ರಾತ್ಯಕ್ಷಿಕೆಯಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ ರೈತರಿಗೆ ಡ್ರೋಣ್ ಬಳಸಿ ಔಷಧಿ ಸಿಂಪಡಣೆ, ಸದುಪಯೋಗ ಹಾಗೂ ಆಗುವ ಅನುಕೂಲ ಕುರಿತು ಸಮಗ್ರ ಮಾಹಿತಿ ನೀಡಿದರು.
ರಿಪ್ಪನ್ ಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶರಣಗೌಡ, ಜಿಲ್ಲಾ ಐಎಫ್ ಸಿಒ ಸಂಸ್ಥೆಯ ಕ್ಷೇತ್ರಾಧಿಕಾರಿ ಬಿ.ಎಲ್. ರಾಜು, ಆತ್ಮ ಯೋಜನೆಯ ಸಿಬ್ಬಂದಿ ಸೈಯದ್ ಅವರ ಸಹಕಾರದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.