

HOSANAGARA | ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಗೆ ಎಸೆದು ಸಾಯಿಸಿದ ಕಿಡಿಗೇಡಿಗಳು
ಹೊಸನಗರ ಪಟ್ಟಣದ ಹೊರ ವಲಯದ ಕುವೆಂಪು ಶಾಲೆಯ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ಹಸುವಿನ ಶವವೊಂದು ಪತ್ತೆಯಾದ ಘಟನೆ ನಡೆದಿದೆ.
ಪಟ್ಟಣದಲ್ಲಿರುವ ಗೋಶಾಲೆಯಲ್ಲಿ 10-20 ಬೀದಿ ಹಸುಗಳು ಇದರ ಜೊತೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಹಸು, ಕರುಗಳನ್ನು ಬಿಡಾಡಿ ದನಗಳನ್ನು ಸಾಕುತ್ತಿದ್ದರು. ಭಾನುವಾರ ರಾತ್ರಿ 12 ಗಂಟೆಯವರೆಗೆ ಗೋ ಶಾಲೆಯ ಗೋ ಸೇವಕರು ದನ-ಕರುಗಳಿಗೆ ಆಹಾರ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ದನದ ಕೊಟ್ಟಿಗೆಗೆ ಹೋಗಿ ಒಂದು ದನವನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪವಿದ್ದ ದನಗಳಿಗೆ ನೀರುಣಿಸುವ ಬಾವಿಗೆ ನೇತು ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಹಾಗೂ ಸಬ್ ಇನ್ಸ್ ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದ ಪೋಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ನೇಣು ಬಿಗಿದ ಸ್ಥಿತಿಯಲ್ಲಿರುವ ದನದ ಶವವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಗ್ನಿಶಾಮಕ ಸಿಬ್ಬಂದಿಯಾದ ಕೆ.ಟಿ ರಾಜಪ್ಪ, ರಾಜೇಶ್, ಸುರೇಶ, ಶಿವರಾಜ್ ಬಿ.ಜೆ, ಕೃಷ್ಣಚಾರಿ ಹೇಮಾಂತ್‌ಕುಮಾರ್‌ರವರ ಸಹಾಯದಿಂದ ನೇಣು ಹಾಕಿರುವ ಕುಣಿಕೆ ತಪ್ಪಿಸಿ ಬಾವಿಯಿಂದ ದನವನ್ನು ಮೇಲೆತ್ತಲಾಯಿತು.
