POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್.

GridArt 20241005 122419739.jpg

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್

ಹೊಸನಗರ: ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಈ ನಿಟ್ಟಿನಲ್ಲಿ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ ಸಾಲ್ವಿಸ್ ಅವರು ಸ್ಮರಣಾರ್ಥ ಈ ಒಂದು ವಾಲಿಬಾಲ್ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಸುಧಾಕರ್ ತಿಳಿಸಿದರು.


ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆಯನ್ನು ನೀಡಿದ ಬಳಿಕ ಮಾತನಾಡಿದ ಅವರು ಬಹಳಷ್ಟು ವರ್ಷಗಳಿಂದ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಇಂತಹ ಹಲವಾರು ಕ್ರೀಡಾಪಟುಗಳಿಗೆ ಪೂರಕವಾಗುವಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ವಿ ಆದಂತಹ ಈ ಸಂಸ್ಥೆ ಇದರ ಪದಾಧಿಕಾರಿಗಳು ಸದಸ್ಯರು ಹಾಗೂ ಹಲವು ದಾನಿಗಳ ಸಹಕಾರದಿಂದ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.


ಪೋಷಕರು ಸಹ ಶಿಕ್ಷಣಕ್ಕೆ ಎಷ್ಟು ಆದ್ಯತೆಯನ್ನು ನೀಡುತ್ತಾರೆ ಕ್ರೀಡೆಗೂ ಸಹ ಅಷ್ಟೇ ಆದ್ಯತೆಯನ್ನು ನೀಡಬೇಕು ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವವರಲ್ಲಿ ಕ್ರೀಡಾಪಟುಗಳು ಬಹಳಷ್ಟು ಇದ್ದಾರೆ ಇದನ್ನು ಪೋಷಕರು ಮನಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷವೂ ಇಂತಹದೊಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.


ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್, ಜಿಮ್ಮಿ ಜಾರ್ಜ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಲಿಯಾಸ್, ಎಂಪಿ ಸುರೇಶ್, ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್, ನಾಗೇಶ್, ಉಷಾ ಗೋನ್ ಸಾಲ್ವಿಸ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.