ಕೆ ಎಸ್ ಈಶ್ವರಪ್ಪ ಬಿಜೆಪಿ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವುದು ಸಲ್ಲ – ಹರತಾಳು ಹಾಲಪ್ಪ
ರಿಪ್ಪನ್‌ಪೇಟೆ : ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ರವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆ ಎಸ್ ಈಶ್ವರಪ್ಪ ಈಗಾಗಲೇ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ ಅವರು ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಅಗತ್ಯತೆ ಇಲ್ಲ, ಕುಟುಂಬ ರಾಜಕಾರಣದಿಂದ ಶುದ್ದೀಕರಣವಾಗಬೇಕು ಎನ್ನುವ ಕೆ ಎಸ್ ಈಶ್ವರಪ್ಪ ರವರು ತಮ್ಮ ಮಗನಿಗೆ ಹಾವೇರಿ ಲೋಕಸಭಾ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡು ಪಕ್ಷ ಬಿಟ್ಟು ಹೋಗಿಲ್ವಾ ಅದು ಕುಟುಂಬ ರಾಜಕಾರಣ ಅಲ್ವಾ ಹೀಗೆ ಸುಖಾಸುಮ್ಮನೆ ನಮ್ಮ ಪಕ್ಷದ ಹಾಗೂ ನಮ್ಮ ರಾಜ್ಯಾಧ್ಯಕ್ಷರ ಬಗ್ಗೆ ಆರೋಪ ಮಾಡುವುದು ಕೆ ಎಸ್ ಈಶ್ವರಪ್ಪ ರಂತಹ ಹಿರಿಯರಿಗೆ ಶೋಭೆ ತರುವುದಿಲ್ಲ ಎಂದರು.
ಕೆ ಎಸ್ ಈಶ್ವರಪ್ಪನವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು , ಉಪ ಮುಖ್ಯಮಂತ್ರಿ , ಇಂಧನ ಹಾಗೂ ಗ್ರಾಮಿಣಾಭಿವೃದ್ದಿ ಯಂತಹ ಪ್ರಭಾವಿ ಖಾತೆಗಳನ್ನು ಪಕ್ಷ ಅವರಿಗೆ ನೀಡಿದೆ ಇಷ್ಟೆಲ್ಲಾ ಆಗಿದ್ದರೂ ಈಗ ಪಕ್ಷದಿಂದ ಹೊರಹೋಗಿ ಮತ್ತೆ ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದ ಸರಿಯಲ್ಲ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ , ಗ್ರಾಪಂ ಸದಸ್ಯರಾದ ಪಿ ರಮೇಶ್ ,ಮಂಜುಳಾ ಕೆ ರಾವ್ , ಸುಂದರೇಶ್ ಹಾಗೂ ಇನ್ನಿತರರಿದ್ದರು.