Headlines

ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ

ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ , ಸಾಂತ್ವಾನ ಹೊಸನಗರ: ಇತ್ತೀಚೆಗೆ ಹಳೇ ರಾಜಕೀಯ ದ್ವೇಷದ ಹಿನ್ನಲೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್ ಮನೆಗೆ ಮಂಗಳವಾರ  ಮಾಜಿ ಶಿಕ್ಷಣ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ವಿಶ್ವನಾಥ್ ಅವರಿಗೆ ಸಾಂತ್ವನ ಹೇಳುವ ಮೂಲಕ ನೈತಿಕ ಸ್ಥೈರ್ಯ ತುಂಬಿದರು. ಅಲ್ಲದೆ, ಈ ಸಂಬಂಧ  ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉನ್ನತ…

Read More

ವಿಷ  ಸೇವಿಸಿ ವ್ಯಕ್ತಿ ಆತ್ಮ*ಹತ್ಯೆ – ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ

ವಿಷ  ಸೇವಿಸಿ ವ್ಯಕ್ತಿ ಆತ್ಮ*ಹತ್ಯೆ – ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ ಶಿವಮೊಗ್ಗ:  ಗಾಡಿಕೊಪ್ಪದ ಸೇವಾಲಾಲ್ ಬೀದಿಯ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಇದು ಆತ್ಮಹತ್ಯೆ ಅಲ್ಲ, ಅನುಮಾನಾಸ್ಪದ ಸಾವು ಎಂದು ಆರೋಪಿಸಿದೆ. ಗಾಡಿಕೊಪ್ಪದ ನಿವಾಸಿ ಭೋಜ್ಯ ನಾಯ್ಕ (೫೮) ಆತ್ಮಹತ್ಯೆ ಮಾಡಿಕೊಂಡಿರುವವರು.  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೂ ಅವರ ಕುತ್ತಿಗೆಯಲ್ಲಿ ನೇಣು  ಬಿಗಿದ ಕಲೆ ಇರುವುದರಿಂದ ಕುಟುಂಬ ಇದೊಂದು ಅನುಮಾನಸ್ಪದ ಸಾವು ಎಂದು ಆರೋಪಿಸಿದೆ. ಭೋಜ್ಯ ನಾಯ್ಕ್ ಅಣ್ಣ ತಮ್ಮಂದಿರ ನಡುವೆ ಆಸ್ತಿ…

Read More

ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ – ಆರೋಪಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಜಾರಿಗೆ ಸಾರ್ವಜನಿಕರ ಮನವಿ

ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ – ಆರೋಪಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಜಾರಿಗೆ ಸಾರ್ವಜನಿಕರ ಮನವಿ ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ನಿಟ್ಟೂರು ಗ್ರಾಮದ ಸಾರ್ವಜನಿಕರು ನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಿಟ್ಟೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವವರ ಮೇಲೆ ಬಿಜೆಪಿ ಕಾರ್ಯಕರ್ತ…

Read More

ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು

ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು ಶಿವಮೊಗ್ಗ: ದಾರಿಯಲ್ಲಿ ಸಿಗುವ ವ್ಯಕ್ತಿಗಳು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣವೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮಾತನಾಡಿಸಿದ್ದಾರೆ. ಕರುಬರಪಾಳ್ಯದ ದುರ್ಗಮ್ಮನ ದೇವಸ್ಥಾನದ ಹುಂಡಿಗೆ ಹಣ ಹಾಕಬೇಕು. ಆದರೆ ದೇವಸ್ಥಾನದ ಬಾಗಿಲು ಹಾಕಿದೆ. ಆ ದುಡ್ಡನ್ನ ನಿಮಗೆ ಕೊಡುತ್ತೇವೆ. ಸಂಜೆ ನೀವೆ ಹಾಕಬಹುದಾ ಎಂದು ಕೇಳಿದ್ದಾರೆ….

Read More

ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ನಗರದ  ಮೊಹಮದ್ ಬಿಲಾಲ್ ಆಯ್ಕೆ

ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ನಗರದ  ಮೊಹಮದ್ ಬಿಲಾಲ್ ಆಯ್ಕೆ ಶಿವಮೊಗ್ಗ: SGFI ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ  ಶಿವಮೊಗ್ಗದ  ಮೊಹಮದ್ ಬಿಲಾಲ್ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್‌ ನಲ್ಲಿ ಡಿಸೆಂಬರ್ 19ರಿಂದ 24ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾನೆ. ದಾವಣಗೆರೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಪೈಕಿ ಮಹಮದ್ ಬಿಲಾಲ್ ಪದಕ ಪಡೆದಿರುವ ಏಕೈಕ ಕ್ರೀಡಾಪಟುವಾಗಿದ್ದಾನೆ. ಕಳೆದ ವರ್ಷ ಸಹ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಹ ಬಿಲಾಲ್ ಪ್ರಥಮ ಸ್ಥಾನ…

Read More

RIPPONPETE | ಸಮುದಾಯ ಆಸ್ಪತ್ರೆಯ ಜಾಗ ಒತ್ತುವರಿ ಆರೋಪ – ಸರ್ವೆಯಿಂದ ಹೊರಬಿತ್ತು ಸತ್ಯಾಂಶ

RIPPONPETE | ಸಮುದಾಯ ಆಸ್ಪತ್ರೆಯ ಜಾಗ ಒತ್ತುವರಿ ಆರೋಪ – ಸರ್ವೆಯಿಂದ ಹೊರಬಿತ್ತು ಸತ್ಯಾಂಶ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಗವಟೂರಿನಲ್ಲಿ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ 5 ಎಕರೆ ಜಾಗ ಖಾಸಗಿಯವರಿಂದ ಒತ್ತುವರಿಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸರ್ವೆ ಕಾರ್ಯ ಇಂದು ನಡೆದು ಯಾವುದೇ ಒತ್ತುವರಿಯಾಗದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಹೊಸನಗರ ರಸ್ತೆಯ ಗವಟೂರು ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಸರ್ಕಾರದಿಂದ 30 ಲಕ್ಷ ರೂ. ವೆಚ್ಚದ ಬೇಲಿ ನಿರ್ಮಾಣ…

Read More

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ:ಬೊಮ್ಮನಕಟ್ಟೆಯ ಗರಡಿ ಮನೆ ಬಳಿಯಿರುವ ತೋಟದಲ್ಲಿನ ಮಾವಿನ ಮರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ  ಬೆಳಿಗ್ಗೆ ೬-೩೦ ಕ್ಕೆ  ವಾಕಿಂಗ್‌ಗೆ ತೆರಳಿದ್ದ ಮಹಿಳೆ ಹೇಮಾವತಿ (೫೦) ತಮ್ಮ ತೋಟದಲ್ಲಿಯೇ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೊಮ್ಮನಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಹೇಮಾವತಿ  ಪ್ರತಿನಿತ್ಯ…

Read More

ಮನೆಯಲ್ಲಿ ಬೈದಿದ್ದಕ್ಕೆ 10 ವರ್ಷದ ಬಾಲಕ ನೇಣು ಬಿಗಿದು ಆತ್ಮ*ಹತ್ಯೆ

ಮನೆಯಲ್ಲಿ ಬೈದಿದ್ದಕ್ಕೆ 10 ವರ್ಷದ ಬಾಲಕ ನೇಣು ಬಿಗಿದು ಆತ್ಮ*ಹತ್ಯೆ 10 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಭಾನುವಾರ ಸಂಜೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಸಂಭವಿಸಿದೆ. ಇಲ್ಲಿನ ಗ್ರಾಮವೊಂದರಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲಕನಿಗೆ ಮನೆಯವರು ಯಾವುದೋ ಕಾರಣಕ್ಕಾಗಿ ಬೈದಿದ್ದರು ಎಂದು ಹೇಳಲಾಗುತ್ತಿದೆ . ಇದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದಾಗ್ಯು ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ…

Read More

ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ

ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪದ ರಾಮನಸರ ಶ್ರೀನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸುಬ್ರಹ್ಮಣ್ಯ ಷಷ್ಠಿ ಮತ್ತು ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶನಿವಾರದಂದು ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ, ಆಶ್ಲೇಷಾ ಬಲಿ ನಡೆಯಿತು. ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಹಾಗೂ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ತಂಡ ಪೂಜಾ ವಿಧಿವಿಧಾನಗಳ ನೆರವೇರಿಸಿದರು. ಉಡುಪಿ ಜಿಲ್ಲೆ…

Read More

ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ

ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಹಿರಿಯ ನ್ಯಾಯವಾದಿ ಡಾ ಕೆ ವೈ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಹೊಸನಗರ ತಾಲ್ಲೂಕಿನ ಅಮೃತ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ವಿಚಾರವಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಬರೆದ ಪುಸ್ತಕವನ್ನು ಶಿವಮೊಗ್ಗದ ಹಿರಿಯ ನ್ಯಾಯವಾದಿ ಡಾ. ಕೆ. ವೈ. ರಾಮಚಂದ್ರಪ್ಪ…

Read More