
ಶಾಂತಿ ಸೌಹಾರ್ಧತೆಯಿಂದ ಐಕ್ಯತೆ ಸಾಧ್ಯ – ಸೊನಲೆ ಶ್ರೀನಿವಾಸ್
ರಿಪ್ಪನ್ಪೇಟೆ : ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಇತಿಹಾಸಕಾರ ಸೊನಲೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಆವರಣದ ಕೂರ ತಂಝಲ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸಿದ್ದ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ…