
ಅಪಘಾತ ತಡೆ ಅಭಿಯಾನ – ಕೆಂಚನಾಳದಲ್ಲಿ ರಿಪ್ಪನ್‌ಪೇಟೆ ಪೊಲೀಸರ ಕಾರ್ಯಾಚರಣೆ
ಬೆಳಗ್ಗೆ ಬೆಳಗ್ಗೆ ಇದ್ದಿದ್ ತಿಂದ್ಕೊಂಡ್ ಕೆಲಸಕ್ಕೆ ಹೋಗೋ ಟೈಂನಲ್ಲಿ ಪೊಲೀಸ್ ಜೀಪ್ ಸೀದಾ ಊರೊಳಗೆ ಬರ್ತಿದ್ದರೇ, ಎಂತಾಯ್ತೋ ಏನೋ? ಏನ್ ಕಥೆಯೋ ಏನೋ? ಇದೆಲ್ಲಿ ಬೇಡದಿರೋ ವ್ಯಾಪಾರ ಅಂತಾ ಅನ್ನಿಸದೇ ಇರದು. ಇಂದು ರಿಪ್ಪನ್ ಪೇಟೆ ಪೊಲೀಸರು ಕೆಂಚನಾಳ ಗ್ರಾಮಕ್ಕೆ ಎಂಟ್ರಿ ಕೊಟ್ಟಾಗ ಅಲ್ಲಿದ್ದವರಿಗೂ ಹಾಗೆ ಅನ್ನಿಸಿತ್ತೇನೋ? ಆದರೆ ಪೊಲೀಸರು ಬೇರೆಯದ್ದೆ ಕಾರಣಕ್ಕೆ ಅಲ್ಲಿಗೆ ಹೋಗಿದ್ದರು. ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಇಂದು ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ತೆರಳಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ…