ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಗಮನ ಕೊಡಿ – ಪಿಎಸ್‌ಐ ಪ್ರವೀಣ್ ಎಸ್ ಪಿ

ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಗಮನ ಕೊಡಿ – ಪಿಎಸ್‌ಐ ಪ್ರವೀಣ್ ಎಸ್ ಪಿ

ರಿಪ್ಪನ್‌ಪೇಟೆ : ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲ. ಭವಿಷ್ಯವಿದ್ದರೂ ಅರ್ಥವಿಲ್ಲ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬರುವೆ ಹಮ್ಮಿಕೊಂಡ ಶಾರದಾ ಪೂಜೆ ಮತ್ತು ಮಕ್ಕಳ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ಜೀವನ ಶೈಲಿಯೂ ಬದಲಾಗಿದೆ. ಆದರೆ, ನೈತಿಕ ಮೌಲ್ಯಗಳು ಅಧಃಪತನವಾಗಿರುವುದು ದುರದೃಷ್ಟಕರ. ಶಿಕ್ಷಕರು, ಪಾಲಕರು ಮಕ್ಕಳಿಗೆ ನಾಗರಿಕ ಸಂಸ್ಕಾರ ನೀಡಿ ಅವರನ್ನು ಹೃದಯವಂತರನ್ನಾಗಿ ರೂಪಿಸಬೇಕು. ಶಾಲಾಭಿಮಾನ, ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡುವಂತೆ ಸಂಸ್ಕಾರಯುತ ಶಿಕ್ಷಣ ನೀಡಿ ಎಂದು ಹೇಳಿದರು.

ಇಂದು ಜಗತ್ತು ಮುನ್ನಡೆಯುತ್ತಿರುವುದು ಮಕ್ಕಳ ಹೆಜ್ಜೆಗಳ ಮೇಲೆ. ಭಾರತದ ಭವಿಷ್ಯವು ವರ್ಗದ ಕೋಣೆಯಲ್ಲಡಗಿದೆ. ಶಿಶು ಕೇಂದ್ರಿಕೃತ ಶಿಕ್ಷಣ ನೀಡಿ ವಿದ್ಯಾರ್ಥಿಗಳಲ್ಲಿಅಕ್ಕರೆ, ಅಕ್ಷರ, ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರದಾಗಿದೆ. ಶಿಕ್ಷಕರು ಗುರುಗಳಾಗಬೇಕು. ಶಾಲೆ ಗುರುಕುಲವಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ  ಧನಲಕ್ಷ್ಮಿ ಗಂಗಾಧರ್ ಸ್ಪರ್ಧಾತ್ಮಕ ಜಗತ್ತಿನ ತಕ್ಕಂತೆ ವಿದ್ಯಾರ್ಥಿಗಳ ಭವಿಷ್ಯವನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕಿದೆ. ವಿದ್ಯಾರ್ಥಿಗಳನ್ನು ಸಹ ಪಠ್ಯದಲ್ಲಿತೊಡಗಿಸಿ, ಸೃಜನಶೀಲತೆ ಹಾಗೂ ಪ್ರಾಯೋಗಿಕ ಜ್ಞಾನ ಮೂಡಿಸುವಂತೆ ಸಿದ್ಧಗೊಳಿಸಬೇಕು. ಕಲಿಕಾ ಪರಿಸರ ಚನ್ನಾಗಿದ್ದರೆ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ. ಮಕ್ಕಳ ಉತ್ತಮ ನಾಳೆಗಾಗಿ ಶಿಕ್ಷಕರು ಪ್ರಯತ್ನಿಸಬೇಕು ಎಂದರು.

ಕನ್ನಡ ಮಾದ್ಯಮಕ್ಕಿಂತ ಇಂಗ್ಲಿಷ್ ಮಾದ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೇ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಾರೆ ಆದ್ದರಿಂದ ಈ ವರ್ಷದಿಂದ ಇಂಗ್ಲೀಷ್ ಮಾದ್ಯಮವನ್ನು ಈ ಶಾಲೆಯಲ್ಲಿ ಪ್ರಾರಂಭಿಸಿ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರ ಮುಖ್ಯ ಶಿಕ್ಷಕ ಉಮೇಶ್ ಸರ್ಕಾರಿ ಶಾಲೆಗಳೆಂದರೆ  ಮೂಗು ಮುರಿಯುವ ಕಾಲದಲ್ಲಿ ಐತಿಹಾಸಿಕ ಹಿನ್ನಲೆಯಿರುವ ಬರುವೆ ಶಾಲೆಯನ್ನು ಶಾಲಾಭಿವೃದ್ದಿ ಸಮಿತಿಯವರ ಸಹಕಾರದೊಂದಿಗೆ ಉಳಿಸಿಕೊಂಡು ನಡೆಸುತಿದ್ದೇವೆ.ಬರುವೆ ಶಾಲೆ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಏಕೈಕ ಕನ್ನಡ ಮಾದ್ಯಮದ ಶಾಲೆಯಾಗಿದ್ದು ಅದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಗಣಪತಿ , ಅಶ್ವಿನಿ ರವಿಶಂಕರ್ , ಸಾರಾಭಿ , ಎಸ್ ಡಿ ಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ,ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಆರ್ ಡಿ ಶೀಲಾ , ಕಸಾಪ ನಿಕಟಪೂರ್ವ ಅಧ್ಯಕ್ಷ ತ ಮ ನರಸಿಂಹ ,ರೋಟರಿ ಅಧ್ಯಕ್ಷ ರಾಮಚಂದ್ರ ,ಗ್ರಾಪಂ ಮಾಜಿ ಸದಸ್ಯ ಶ್ರೀನಿವಾಸ್ ಆಚಾರ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *