Headlines

ಅಪಘಾತ ತಡೆ ಅಭಿಯಾನ – ಕೆಂಚನಾಳದಲ್ಲಿ ರಿಪ್ಪನ್‌ಪೇಟೆ ಪೊಲೀಸರ ಕಾರ್ಯಾಚರಣೆ

ಬೆಳಗ್ಗೆ ಬೆಳಗ್ಗೆ ಇದ್ದಿದ್‌ ತಿಂದ್ಕೊಂಡ್‌ ಕೆಲಸಕ್ಕೆ ಹೋಗೋ ಟೈಂನಲ್ಲಿ ಪೊಲೀಸ್‌ ಜೀಪ್‌ ಸೀದಾ ಊರೊಳಗೆ ಬರ್ತಿದ್ದರೇ, ಎಂತಾಯ್ತೋ ಏನೋ? ಏನ್‌ ಕಥೆಯೋ ಏನೋ? ಇದೆಲ್ಲಿ ಬೇಡದಿರೋ ವ್ಯಾಪಾರ ಅಂತಾ ಅನ್ನಿಸದೇ ಇರದು. ಇಂದು ರಿಪ್ಪನ್‌ ಪೇಟೆ ಪೊಲೀಸರು ಕೆಂಚನಾಳ ಗ್ರಾಮಕ್ಕೆ ಎಂಟ್ರಿ ಕೊಟ್ಟಾಗ ಅಲ್ಲಿದ್ದವರಿಗೂ ಹಾಗೆ ಅನ್ನಿಸಿತ್ತೇನೋ? ಆದರೆ ಪೊಲೀಸರು ಬೇರೆಯದ್ದೆ ಕಾರಣಕ್ಕೆ ಅಲ್ಲಿಗೆ ಹೋಗಿದ್ದರು.

ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಇಂದು ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ತೆರಳಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರಿಪ್ಲೆಕ್ಷನ್ ಸ್ಟಿಕ್ಕರ್ ಅಳವಡಿಸುವ ಮೂಲಕ ಚಾಲಕ ಹಾಗೂ ಮಾಲೀಕರಲ್ಲಿ ಜಾಗೃತಿ‌ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ.

ಹೌದು ರಿಪ್ಪನ್‌ಪೇಟೆ ಪೊಲೀಸ್ ಜೀಪ್ ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಯಲ್ಲೂ ಶಬ್ದ ಮಾಡಿತ್ತು ಕಾರಣವೇನೆಂದರೇ ಅಪಘಾತ ತಡೆಯುವ ಮಹತ್ತರವಾದ ಉದ್ದೇಶದಿಂದ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರಿಫ್ಲೆಕ್ಷನ್ ಸ್ಟಿಕ್ಕರ್ ಅಳವಡಿಸುವ ಕಾರ್ಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡದಿಂದ ಹಮ್ಮಿಕೊಳ್ಳಲಾಗಿತ್ತು.

ಕೆಂಚನಾಳ ಗ್ರಾಪಂ ವ್ಯಾಪ್ತಿಯ ಮಾದಾಪುರ, ಆಲುವಳ್ಳಿ , ಹೊನ್ನಕೊಪ್ಪ , ಗಾಳಿಬೈಲು ಗ್ರಾಮದಲ್ಲಿ ಸಂಜೆ ತಡವಾಗಿ ಹೊಲಗಳಿಂದ ಮನೆಗಳಿಗೆ ಬರುವ, ಟ್ರ್ಯಾಕ್ಟರ್, ಟ್ರೇಲರ್‌ಗಳು ರಸ್ತೆಗಳಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಸಮರ್ಪಕವಾಗಿ ಗೋಚರಿಸದ ಕಾರಣ ಅಪಘಾತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚು ಈ ಹಿನ್ನಲೆಯಲ್ಲಿ ಇಂದು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಸಿಬ್ಬಂದಿಗಳ ತಂಡ ಕೆಂಚನಾಳ ಗ್ರಾಪಂ ಸಹಕಾರದೊಂದಿಗೆ ಟ್ರ್ಯಾಕ್ಟರ್ ,ಟಿಲ್ಲರ್ ಹಾಗೂ ಟ್ರೈಲರ್ ಗಳಿಗೆ ರಿಫ್ಲೆಕ್ಷನ್ ಸ್ಟಿಕ್ಕರ್ ಅಂಟಿಸುವ ಕಾರ್ಯ ಕೈಗೊಂಡಿದ್ದರು.

ಕೃಷಿ ಪ್ರಧಾನ ಚಟುವಟಿಕೆಯಾಗಿರುವ ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಖುದ್ದು ಪೊಲೀಸರೇ ಗದ್ದೆ , ತೋಟಕ್ಕೆ ಹೋಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಮಾಲೀಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಸ್ಟಿಕ್ಕರ್ ಅಳವಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪಘಾತ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸುವ ಮೂಲಕ ಚಾಲಕರಲ್ಲಿ ಜಾಗೃತಿ ಮೂಡಿಸಿದ ರಿಪ್ಪನ್‌ಪೇಟೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎ ಎಸೈ ಮಂಜಪ್ಪ , ಉಮೇಶ್ , ಸೋಮಶೇಖರ್ ,ಗಿರೀಶ್ , ಸಂತೋಷ್ ಕೊರವರ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *