ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್

ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್

ಹಳೆಯ ಬೊಮ್ಮನಕಟ್ಟೆಯಲ್ಲಿ ಶನಿವಾರ ನಡೆದ ರೌಡಿ ಶೀಟರ್ ರಾಜೇಶ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಶನಿವಾರ ಹಾಡಹಗಲೇ ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ರಾಜೇಶ್ ಶೆಟ್ಟಿಯನ್ನು ಬರ್ಬರ ಹತ್ಯೆಗೈದಿದ್ದರು.

ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ  ಚಿಟ್ಟೆ ನಾಗ, ಗಣೇಶ, ಕಿರಣ್‌ ಗೌಡ, ವೆಂಕಟೇಶ್‌ ರನ್ನು ಬಂಧಿಸಲಾಗಿದ್ದು ಇನ್ನಿಬ್ಬರು ಆರೋಪಿಗಳಾದ ಡಿಂಗಾ ದೀಪು , ಕರಿಯಾ ವಿನಯ್‌ ಎಸ್ಕೇಪ್‌ ಆಗಿದ್ದಾರೆ.

ಕೊಲೆ ನಡೆದು ಕೇವಲ 24 ಗಂಟೆಯ ಒಳಗೆ ಆರು ಜನ ಆರೋಪಿಗಳಲ್ಲಿ ನಾಲ್ವರನ್ನು ಶಿವಮೊಗ್ಗ ವ್ಯಾಪ್ತಿಯೊಳಗೆ ವಿನೋಬನಗರ ಪೊಲೀಸರು ಹಿಡಿದಿದ್ದು ಸ್ಥಳ ಮಹಜರಿಗೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ದ ಘಟನೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *