Headlines

ಇಸ್ಪೀಟು ಅಡ್ಡೆಯ ಮೇಲೆ ರಿಪ್ಪನ್‌ಪೇಟೆ ಪೊಲೀಸರ ದಾಳಿ – ನಗದು ಸಹಿತ ಒಂಬತ್ತು ಆರೋಪಿಗಳು ವಶಕ್ಕೆ..!!

ಇಸ್ಪೀಟು ಅಡ್ಡೆಯ ಮೇಲೆ ರಿಪ್ಪನ್‌ಪೇಟೆ ಪೊಲೀಸರ ದಾಳಿ – ನಗದು ಸಹಿತ ಒಂಬತ್ತು ಆರೋಪಿಗಳು ವಶಕ್ಕೆ..!!

ರಿಪ್ಪನ್‌ಪೇಟೆ : ಅಕ್ರಮವಾಗಿ ಹಣ ಪಣಕ್ಕಿಟ್ಟು ಇಸ್ಪೀಟು ಆಡುತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಒಂಬತ್ತು ಮಂದಿ ಆರೋಪಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ್ದ ಹಣವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ರಿಪ್ಪನ್‌ಪೇಟೆ ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಆಡುತಿದ್ದ ಅಡ್ಡೆ ಮೇಲೆ ದಿಡೀರ್ ದಾಳಿ ನಡೆಸಿ ರಿಪ್ಪನ್‌ಪೇಟೆ ಪೊಲೀಸರು ಜೂಜುಕೋರರ ಹೆಡೆಮುರಿ ಕಟ್ಟಿದ್ದಾರೆ.

ಪಟ್ಟಣದ ಸಮೀಪದ ಹೆಗ್ಗೆರೆ ಕೆರೆ ಬಳಿಯಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪಿಎಸ್ಐ ಪ್ರವೀಣ್ ಎಸ್ ಪಿ  ನೇತೃತ್ವದ ತಂಡ ಇಸ್ಪೀಟ್ ಜೂಜಾಟದಲ್ಲಿ ಭಾಗಿಯಾಗಿದ್ದ ಒಂಬತ್ತು ಮಂದಿ ಆರೋಪಿಗಳು ಹಾಗೂ ನಗದು ಹಣ – 2100/- ರೂಪಾಯಿ, 52 ಇಸ್ಪೀಟ್ ಕಾರ್ಡ್ ಗಳು ಹಾಗೂ ಎರಡು ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ.

ಈ ದಾಳಿಯಲ್ಲಿ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಉಮೇಶ್, ಸಂತೋಷ್,ಪರಮೇಶ್ , ಚೆನ್ನಪ್ಪ ಹಾಗೂ ಮಧುಸೂಧನ್ ಇದ್ದರು.

Ripponpet police raid on Ispeetu Adde

Leave a Reply

Your email address will not be published. Required fields are marked *