POSTMAN NEWS

ನೈಜ ಸುದ್ದಿ ನೇರ ಬಿತ್ತರ..

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಅತ್ತೆ ,ಸೊಸೆ ಇಬ್ಬರು ಸ್ಥಳದಲ್ಲಿಯೇ ಸಾವು

GridArt 20241119 141415997.jpg

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಅತ್ತೆ ,ಸೊಸೆ ಇಬ್ಬರು ಸ್ಥಳದಲ್ಲಿಯೇ ಸಾವು

ಶಿವಮೊಗ್ಗ : ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆ ಸಮೀಪದ ಬೊಮ್ಮನ ಕಟ್ಟೆ ಬಳಿ ನಡೆದಿದೆ.

ಮೃತರನ್ನು ಅನಿತಾ (30) ಮತ್ತು ರತ್ನಮ್ಮ (55) ವರ್ಷ ಎಂದು ಗುರುತಿಸಲಾಗಿದೆ.

ಮೃತರು ಹೊಳಲ್ಕೆರೆಯ ತಾಳ್ಯ ನಿವಾಸಿಗಳು. ತಮ್ಮ ಪತಿಯ ಜೊತೆ ಅನಿತಾ ಹಾಗೂ ಅವರ ಅತ್ತೆ ರತ್ನಮ್ಮ ಊರಿಗೆ ಬರುತ್ತಿದ್ದರು. 

ಈ ವೇಳೆ ರಸ್ತೆಗೆ ಅಡ್ಡಬಂದ ನಾಯಿಗೆ ಕಾರು ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಕಾರು ಕೆರೆಗೆ ಉರುಳಿದೆ. ಕೆರೆ ಏರಿ ಮೇಲೆಯೇ ಘಟನೆ ನಡೆದಿದ್ದರಿಂದ ಚಾಲಕನಿಗೆ ಕಾರು ಕಂಟ್ರೋಲ್‌ಗೆ ಸಿಗದೇ ಕೆರೆಗೆ ಸೀದಾ ಕಾರು ಇಳಿದಿದೆ. ಇನ್ನು ಕಾರು ಕೆರೆಗೆ ಬಿದ್ದ ಬೆನ್ನಲ್ಲೆ, ಆಘಾತಕ್ಕೊಳಗಾದ ಅನಿತಾ ಮತ್ತು ರತ್ನಮ್ಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈ ವಿಚಾರವಾಗಿ ಹೊಳೆಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.