HUMCHA | ಅಕ್ರಮ ಮರ ಕಡಿತಲೆ – ಪ್ರಕರಣ ದಾಖಲು

HUMCHA | ಅಕ್ರಮ ಮರ ಕಡಿತಲೆ – ಪ್ರಕರಣ ದಾಖಲು ಹೊಸನಗರ ತಾಲೂಕಿನ ಹುಂಚ ಗ್ರಾ ಪಂ ವ್ಯಾಪ್ತಿಯ ಹುತ್ತಳ್ಳಿ ಗ್ರಾಮದ ಸರ್ವೇ ನಂಬರ್ 31 ರ ಅರಸಾಳು ವಲಯ ಅರಣ್ಯ ವ್ಯಾಪ್ತಿಯಲ್ಲಿ  ನೂರಾರು ಮರ ಗಿಡಗಳನ್ನು ಅಕ್ರಮವಾಗಿ ಕಡಿದಿರುವ ಘಟನೆಗೆ ಸಂಬಂಧಿಸಿ ಭಾನುವಾರ ಪ್ರಕರಣ ದಾಖಲಾಗಿದೆ. ಹುತ್ತಳ್ಳಿ ಗ್ರಾಮದ ಸರ್ವೆ ನಂ. 31 ರಲ್ಲಿದ್ದ ನೈಸರ್ಗಿಕ ಅರಣ್ಯವನ್ನು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ದೇವರಾಜ್ ಎಂಬುವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುಮಾರು 4 ಎಕರೆ…

Read More

ಹುಂಚ ಗ್ರಾಪಂ ಅಧ್ಯಕ್ಷೆ ಹುದ್ದೆಗಾಗಿ ಆಂತರಿಕ ಕಿತ್ತಾಟ – ನಿ… ಕೊಡೆ , ನಾ..ಬಿಡೆ

ಹುಂಚ ಗ್ರಾಪಂ ಅಧ್ಯಕ್ಷೆ ಹುದ್ದೆಗಾಗಿ ಆಂತರಿಕ ಕಿತ್ತಾಟ – ನಿ… ಕೊಡೆ , ನಾ..ಬಿಡೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಂತರಿಕ ಕಿತ್ತಾಟ ಹೆಚ್ಚಾಗಿದ್ದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೌದು ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಒಡಂಬಡಿಕೆಯಂತೆ ಅವಧಿಯ ನಂತರ ಸ್ಥಾನವನ್ನು ಬಿಟ್ಟುಕೊಡದೇ ಪಟ್ಟು ಹಿಡಿದು ಕುಳಿತಿದ್ದಾರೆ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಆರೋಪಿಸುತ್ತಿದ್ದರೆ, ತಾನು ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಬೋರ್ಡ್ ರಚಿಸಲು ಕಷ್ಟ…

Read More

ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ಅಗತ್ಯ – ಶ್ರೀಪತಿ ರಾವ್

ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ಅಗತ್ಯ – ಶ್ರೀಪತಿ ರಾವ್ ಸರ್ಕಾರಿ ಶಾಲೆಗೆ ಪೀಠೋಪಕರಣಗಳ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ರಿಪ್ಪನ್‌ಪೇಟೆ : ತಂದೆ ದಿ.ವೆಂಕಟರಾವ್ ಮತ್ತು ತಾಯಿ ಪುಟ್ಟಮ್ಮ ಇವರ ಸ್ಮರಣಾರ್ಥ ಹುಂಚ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸುಮಾರು 50 ಸಹಸ್ರ ರೂ ಮೌಲ್ಯದ ಡೆಸ್ಕ್ ಮತ್ತು ಲೈಬ್ರರಿ ಅಲ್ಮೇರಾ ಗಳನ್ನು ಮಕ್ಕಳಾದ ಹೆಚ್.ವಿ.ಶ್ರೀಪತಿರಾವ್ ಮತ್ತು ಇಂದುಮತಿ ಮತ್ತು ಕುಟುಂಬದವರು ಕೊಡುಗೆಯಾಗಿ ನೀಡಿದರು. ಕೊಡುಗೆಯಾಗಿ ನೀಡಿ ಮಾತನಾಡಿದ ಹೆಚ್.ವಿ.ಶ್ರೀಪತಿರಾವ್ ನಮ್ಮ ತಂದೆ…

Read More

ಹುಂಚ ಕಲ್ಲು ಕ್ವಾರೆಯಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿಯ ನಿಗೂಡ ಸಾವು – ಪೊಲೀಸ್ ತನಿಖೆ ಚುರುಕು

ಹುಂಚ ಕಲ್ಲು ಕ್ವಾರೆಯಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿಯ ನಿಗೂಡ ಸಾವು – ಪೊಲೀಸ್ ತನಿಖೆ ಚುರುಕು ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ವಾರೆಯೊಂದರಲ್ಲಿ ಕೆಲಸ ಮಾಡುತಿದ್ದು ಶುಕ್ರವಾರ ರಾತ್ರಿ ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ನಡೆದಿದ್ದೇನು ..!!?? ಉತ್ತರ ಭಾರತದ ಹಲವು ಕಾರ್ಮಿಕರು ಈ ಕಲ್ಲು ಕ್ವಾರೆಯಲ್ಲಿ ಕೆಲಸ ನಿರ್ವಹಿಸುತಿದ್ದು ಶುಕ್ರವಾರ…

Read More

ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ – ಸುಮಂಗಳ ದೇವರಾಜ್

ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ – ಸುಮಂಗಳ ದೇವರಾಜ್ ಹುಂಚ : ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಇದರಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಹೇಳಿದರು. ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದಡಿ ಹುಂಚಾ ಗ್ರಾಪಂ ವತಿಯಿಂದ ಹೊಂಬುಜ ಜೈನ ಮಠ , ಪದ್ಮಾಂಬಾ ಪ್ರೌಡ ಶಾಲೆ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ…

Read More

HUMCHA|ತೋಟಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ನಾಗಭೂಷಣ್ ರಾವ್ ನಿಧನ

HUMCHA |  ತೋಟಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ನಾಗಭೂಷಣ್ ರಾವ್ ನಿಧನ ತೋಟಕ್ಕೆ ತೆರಳಿದ್ದ ವೇಳೆಯಲ್ಲಿ ಹೃದಯಾಘಾತಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಗೇರ್ ಗಲ್ ನಲ್ಲಿ ನಡೆದಿದೆ. ಗೇರ್ ಗಲ್ ನಿವಾಸಿ ನಾಗಭೂಷಣ್ ರಾವ್ ಜಿ ಸಿ ಮೃತ ದುರ್ಧೈವಿಯಾಗಿದ್ದಾರೆ. ಮೃತರು ಪ್ರತಿಷ್ಠಿತ ಗೇರ್ ಗೇಲ್ ಕುಟುಂಬದವರು ಆಗಿದ್ದು ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇಂದು ಸಂಜೆ ಗೇರ್ ಗಲ್ ನಲ್ಲಿರುವ ತಮ್ಮ…

Read More