ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ಅಗತ್ಯ – ಶ್ರೀಪತಿ ರಾವ್
ಸರ್ಕಾರಿ ಶಾಲೆಗೆ ಪೀಠೋಪಕರಣಗಳ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ
ರಿಪ್ಪನ್‌ಪೇಟೆ : ತಂದೆ ದಿ.ವೆಂಕಟರಾವ್ ಮತ್ತು ತಾಯಿ ಪುಟ್ಟಮ್ಮ ಇವರ ಸ್ಮರಣಾರ್ಥ ಹುಂಚ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸುಮಾರು 50 ಸಹಸ್ರ ರೂ ಮೌಲ್ಯದ ಡೆಸ್ಕ್ ಮತ್ತು ಲೈಬ್ರರಿ ಅಲ್ಮೇರಾ ಗಳನ್ನು ಮಕ್ಕಳಾದ ಹೆಚ್.ವಿ.ಶ್ರೀಪತಿರಾವ್ ಮತ್ತು ಇಂದುಮತಿ ಮತ್ತು ಕುಟುಂಬದವರು ಕೊಡುಗೆಯಾಗಿ ನೀಡಿದರು.
ಕೊಡುಗೆಯಾಗಿ ನೀಡಿ ಮಾತನಾಡಿದ ಹೆಚ್.ವಿ.ಶ್ರೀಪತಿರಾವ್ ನಮ್ಮ ತಂದೆ ತಾಯಿಯವರು ಜೀವಿತಾವಧಿಯಲ್ಲಿ ಸಾಕಷ್ಟು ದಾನಧರ್ಮಗಳನ್ನು ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ದೂರು ಉಳಿದ ಬಡ ಮಕ್ಕಳಿಗೆ ಶಾಲೆಗೆ ಸೇರಿಸುವ ಮೂಲಕ ಅವರನ್ನು ಶಿಕ್ಷಣದ ವೆಚ್ಚವನ್ನು ಕೊಡುವುದರೊಂದಿಗೆ ಪ್ರೋತ್ಸಾಹಿಸಿದರು.ಅವರ ಸೇವೆಯನ್ನು ಮಕ್ಕಳಾದ ನಾವು ಪೂರ್ಣ ಮಾಡಲಾಗದಿದ್ದರೂ ಸಾಸುವೆಯಷ್ಟಾದರೂ ಮಾಡಿ ಮಾತಾ ಪಿತೃಗಳ ಪರಿಪಾಲಕರಾಗೋಣ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾಸಮಿತಿ ಆಧ್ಯಕ್ಷರಾದ ಅಶ್ವತ್‌ನಾರಾಯಣ ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರಪ್ಪ,ಸಿಆರ್‌ಪಿ ದೀಪಾಪ್ರಕಾಶ್ ಹಾಗೂ ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕ ವೃಂದ ಹಾಜರಿದ್ದು ಕೊಡಗೈ ದಾನಿಗಳಾದ ಶ್ರೀಪತಿರಾವ್ ಮತ್ತು ಇಂದುಮತಿ.ಶರತ್.ಅಂಬಿಕಾ, ರಶ್ಮಿ,ಅನಿತಾ, ರಾಜೇಶ್ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಎಲ್.ಮಹಾಲಕ್ಷಿö್ಮ ವಹಿಸಿದ್ದರು.
ಹುಂಚ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ.ಸದಸ್ಯರು.ಹಾಗೂ ಗ್ರಾಮಸ್ಥರಾದ ಕಿರಣಕುಮಾರ್,ಯಧುಕುಮಾರ್,ನಾಗೇಂದ್ರ,ಶಿಕ್ಷಕರಾದ ಹೆಚ್.ಆರ್.ಕುಮಾರಸ್ವಾಮಿ,ಕೆ.ಹೆಚ್.ಕುಮಾರಿ ಸಿಂಧು,ಅನುಷ ಇನ್ನಿತರರು ಹಾಜರಿದ್ದರು.